ಸೀಟ್ ಬ್ಲಾಕಿಂಗ್ ತನಿಖೆ: ಶೀಘ್ರವೇ ಪೊಲೀಸ್ ಆಯುಕ್ತರ ಜತೆ ಸಭೆ: ಸಚಿವ ಡಾ. ಎಂ.ಸಿ. ಸುಧಾಕರ್

syber
Published on

ಬೆಂಗಳೂರು: ಕಳೆದ ವರ್ಷದ ಸಿಇಟಿ ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿ ಕಾಲೇಜುಗಳ ಪಾತ್ರದ ಬಗ್ಗೆ ಸದ್ಯದಲ್ಲಿಯೇ ಪೊಲೀಸ್ ಆಯುಕ್ತರ ಜತೆ ಸಭೆ ನಡೆಸಲಾಗುವುದು ಎಂದು ಇದೇ ವೇಳೆ ಸಚಿವ ಸುಧಾಕರ್ ತಿಳಿಸಿದರು.

ಸೀಟ್ ಬ್ಲಾಕಿಂಗ್ ಪ್ರಕರಣ ಬಗ್ಗೆ ಪೊಲೀಸರು ತನಿಖೆ ನಡೆಸಿ ಕಿಂಗ್‌ಪಿನ್‌ಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದರಲ್ಲಿ ಕಾಲೇಜುಗಳ ಪಾತ್ರವಿದೆಯಾ ಎಂಬುದು ತನಿಖೆಯಿಂದಲೇ ಹೊರಬರಬೇಕು. ಆದರೆ, ಈ ಬಗ್ಗೆ ಪೊಲೀಸರು ಯಾವುದೇ ಮಾತಿಯನ್ನು ಇದುವರೆಗೆ ನೀಡಿಲ್ಲ. ಆ ನಿಟ್ಟಿನಲ್ಲಿ ತನಿಖೆ ಯಾಕೆ ವಿಳಂಬ ಆಗಿದೆ ಎಂದು ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆಯಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net