

ಚಿತ್ರದುರ್ಗ: ರಾಜ್ಯದಲ್ಲಿ ದಿನಕ್ಕೊಂದು ಹಗರಣ ಹೊರಬರುತ್ತಿದೆ. ವಾಲ್ಮೀಕಿ ಹಗರಣದಲ್ಲಿ ಇಡಿ ದಾಳಿಯಾಗಿದೆ. ಮುಡಾ ಕೇಸ್‌ನಲ್ಲಿ 100 ಕೋಟಿ ರೂ. ವಶಪಡಿಸಿಕೊಂಡಿರುವ ಇಡಿ ಸರ್ಕಾರಕ್ಕೆ ಒಪ್ಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಕ್ಯಾಮ್ ಲೀಡರ್ ಆಗಿ ಹೊರಹೊಮ್ಮಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿಗರು ಜಾತಿ ಗಣತಿಗೆ 250 ಕೋಟಿ ರೂ. ಖರ್ಚು ಮಾಡಿದ್ದು, ವರದಿಯನ್ನು ಕಸದ ಪುಟ್ಟಿಗೆ ಹಾಕಿದ್ದಾರೆ. ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಎಐಸಿಸಿ ಗೈಡ್‌ಲೈನ್ ಪಾಲಿಸುವುದಾದರೆ, ಮರು ಜಾತಿಗಣತಿ, ಈ ಹಿಂದೆ ನಡೆದಿರುವ ಗಣತಿಯ ಹಣವನ್ನು ಭರಿಸಲು ಪಕ್ಷದಿಂದಲೇ ಕ್ರೋಢಿಕರಿಸಲಿ ಎಂದು ಹರಿಹಾಯ್ದರು.