

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ರಾಜವಂಶಸ್ಥರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಮೈಸೂರು ರಾಜವಂಶಸ್ಥರ ಆಸ್ತಿ ವಿಚಾರದಲ್ಲಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಮೈಸೂರು ರಾಜವಂಶಸ್ಥರು ರಾಜ್ಯದ ಜನತೆಗೆ ಅನೇಕ ಕೊಡುಗೆ ನೀಡಿದ್ದಾರೆ. ಕೆಆರ್‌ಎಸ್ ಕಟ್ಟಿಸಿದ್ದಾರೆ. ಸೋಪು, ಸಕ್ಕರೆ, ಕಬ್ಬಣ ಸೇರಿದಂತೆ ಅನೇಕ ಕಾರ್ಖಾನೆ ನಿರ್ಮಿಸಿದ್ದರು. ಆದರೆ, ಅಂತಹ ಮೈಸೂರು ರಾಜವಂಶಸ್ಥರಿಗೆ ಕಿರುಕುಳ ನೀಡಿದರೆ ಸಿದ್ದರಾಮಯ್ಯ ಅವರಿಗೆ ನೆಮ್ಮದಿ ಇಲ್ಲ ಎಂದು ದೂರಿದರು.
ಟಿಪ್ಪು ಹೆಸರು ಹೇಳಿದರೆ ಸಾಕು ಕೋಟಿ ಕೋಟಿ ರೂ. ಹಣ ನೀಡುತ್ತಾರೆ. ಇಡೀ ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡುತ್ತಾರೆ. ಆದರೆ, ಜನ ಸೇವೆ ಮಾಡಿದ ರಾಜವಂಶಸ್ಥರನ್ನು ಟಾರ್ಗೆಟ್ ಮಾಡುತ್ತಾರೆ ಎಂದರು.