ಸಿದ್ದರಾಮಯ್ಯ, ಕಾಂಗ್ರೆಸ್​ಗೆ, ಕೊನೆಗಾಲ, ಉತ್ಸವ - ಸವದಿ

aaaa
Published on

ಜಮಖಂಡಿ: ಸಿದ್ದರಾಮೋತ್ಸವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕಾಂಗ್ರೆಸ್​ಗೆ "ಕೊನೆಗಾಲ ಉತ್ಸವ' ಆಗಲಿದೆ ಎಂದು ವಿಧಾನ ಪರಿಷತ್​ ಸದಸ್ಯ, ಮಾಜಿ ಉಪಮುಖ್ಯಮಂತ್ರಿ ಸವದಿ ಟೀಕಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಈಗಾಗಲೇ ಗುದ್ದಾಟ ಆರಂಭವಾಗಿದೆ. ಕಾಂಗ್ರೆಸ್​ ನಾಯಕರು ಕೂಸು ಹುಟ್ಟುವುದಕ್ಕಿಂತ ಮುಂಚೆಯೇ ಕುಲಾವಿ ಹೊಲಿಸುವ ಕಾರ್ಯ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಈಗಾಗಲೇ ಅಧಿ-ಕಾರ ಅನುಭವಿಸಿದ್ದಾರೆ. ಅವರ ಪದಲ್ಲೇ ಸಿಎಂ ಆಗಬಾರದು ಎಂಬ ಅಪಸ್ವರ ಎದ್ದಿವೆ. ಡಿ.ಕೆ. ಶಿವಕುಮಾರ ಅವರೂ ತಾನು ಮುಖ್ಯಮಂತ್ರಿ ಆಗಬೇಕು ಎನ್ನುತ್ತಾರೆ. ಮಲ್ಲಿಕಾರ್ಜುನ ರ್ಖಗೆ ಅವರೂ ಸಿಎಂ ಆಗಿ ನಿವೃತ್ತಿ ಆಗಬೇಕು ಎಂಬ ಆಸಕ್ತಿ ಹೊಂದಿದ್ದಾರೆ. ದಲಿತ ನಾಯಕ ಎಚ್​.ಸಿ. ಮಹಾದೇವಪ್ಪ ಸೇರಿದಂತೆ ಅವರ ಹಲವಾರು ನಾಯಕರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾನು ಪದ ಶಿಸ್ತಿನ ಸಿಪಾಯಿ. ನಾನು ಜಮಖಂಡಿ ೇತ್ರದಿಂದ ಸ್ಪ-ರ್ಧಿಸುವ ಬಗ್ಗೆ ಏನೂ ಗೊತ್ತಿಲ್ಲ. ಪದ ವರಿಷ್ಠರು ಎಲ್ಲಿ ಹೇಳುತ್ತಾರೋ ಅಲ್ಲಿ ನಾನು ಖಂಡಿತವಾಗಿಯೂ ಸ್ಪರ್ಧೆ ಮಾಡುತ್ತೇನೆ ಎಂದು ಲಕ್ಷ$್ಮಣ ಸವದಿ ತಿಳಿಸಿದರು. ಬಳಿಕ ಅವರು ಜಮಖಂಡಿ ನಗರದ ಮುಸ್ಲಿಂ ಪ್ರಮುಖ ನಾಯಕ, ನಗರಸಭೆ ಮಾಜಿ ಸದಸ್ಯ, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ತೌಫೀಕ್​ ಪಾರ್ಥನಳ್ಳಿ ಅವರ ನಿವಾಸಕ್ಕೆ ಲಕ್ಷ$್ಮಣ ಸವದಿ ಭೇಟಿ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು.

ಕಾಡು ಮಾಳಿ, ತೌಫೀಕ್​ ಪಾರ್ಥನಳ್ಳಿ, ಸಂಜು ತೇಲಿ, ಭೀಮಶಿ ಮಾಚಕನೂರ, ಸೂರಜ್​ ಕುಡ್ರಾನಿ, ಪರಶುರಾಮ ಕಾಂಬಳೆ, ಉಸ್ಮಾನ್​ ಜಹಗೀರದಾರ, ಅಶ್ರ್​ ಪಠಾಣ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net