ಸಿಎಲ್‌ಟಿ ಪರೀಕ್ಷೆಯಿಂದ ವಿನಾಯಿತಿ ನೀಡಿ

Published on

ಕೋಲಾರ: ೫೦ ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಸಿಎಲ್‌ಟಿ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ರೈತ ಸಂಘ(ಎಂಡಿಎನ್ ಬಣ) ಒತ್ತಾಯಿಸಿದ್ದು, ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಶಾಸಕರ ಕಚೇರಿಯಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಿ ಮಾತನಾಡಿದ ಯುವಘಟಕದ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಸರ್ಕಾರಿ ನೌಕರರಿಗೆ ಸಿಎಲ್‌ಟಿ ಪರೀಕ್ಷೆ ಮತ್ತು ಕಂಪ್ಯೂಟರ್ ಶಿಕ್ಷಣ ಕಡ್ಡಾಯ ಮಾಡಿದ್ದು, ೫೦ವರ್ಷ ಮೇಲ್ಪಟ್ಟವರು ಸಕ್ಕರೆ ಕಾಯಿಲೆ, ಬಿಪಿ, ಕಣ್ಣಿನ ದೃಷ್ಟಿ ದೋಷ ಸೇರಿ ನಾನಾ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಸರ್ಕಾರದ ಈ ಆದೇಶದಿಂದ ಮುಂಬಡ್ತಿಗೂ ತೊಂದರೆಯಾಗಿದೆ. ೨೫ * ೩೦ ವರ್ಷ ಸರ್ಕಾರಿ ಸೇವೆ ಸಲ್ಲಿಸಿದವರಿಗೆ ಸಹ ಮುಂಬಡ್ತಿ ಸಿಗದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ೫೦ ವರ್ಷ ಮೇಲ್ಪಟ್ಟವರಿಗೆ ಸಿಎಲ್‌ಟಿ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಆದರೆ ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಎಲ್ಲ ನೌಕರರಿಗೂ ಸಿಎಲ್‌ಟಿ ಪರೀಕ್ಷೆ ಕಡ್ಡಾಯ ಮಾಡಿ ಆದೇಶಿಸಲಾಗಿತ್ತು. ಹೀಗಾಗಿ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷರು ಕೊತ್ತಂಬರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಮುಖಂಡರಾದ ಲಕ್ಷ್ಮೀನಾರಾಯಣ ಶೆಟ್ಟಿ, ಜಗನ್ನಾಥ್‌ರೆಡ್ಡಿ, ತಿಪ್ಪಸಂದ್ರ ಹರೀಶ್, ದೊಡ್ಡ ಕುರುಬರಹಳ್ಳಿ ಶಂಕರೇಗೌಡ, ಕಾಡುಕಚ್ಚನಹಳ್ಳಿ ವಿಶ್ವನಾಥ್, ಕದರೆನಹಳ್ಳಿ ಶ್ರೀನಿವಾಸ್, ತೇರಹಳ್ಳಿ ಚಂದ್ರಪ್ಪ ಜಿಲ್ಲಾ ಕಾರ್ಯದರ್ಶಿ ಮಡಿವಾಳ ಮುನಿರಾಜು, ಧನರಾಜ್, ಹನುಮಪ್ಪ, ಸತೀಶ್, ರೂಪಶ್ರೀ, ಬಹದ್ದೂರ್ ಖಾನ್, ನರಸಿಂಹ, ರಾಮಚಂದ್ರ, ಅನಂತ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net