ಸಿಎಂಗೆ ಜನರ ಶಾಪ ತಟ್ಟಲಿದೆ

Vijayendra
Published on

ಚಿತ್ರದುರ್ಗ: ಅಹಿಂದ ಹೆಸರೇಳಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಸಮುದಾಯಗಳಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ. ಜನರಿಗೂ ಆಶ್ವಾಸನೆ ನೀಡುತ್ತ ವಂಚಿಸಿದ್ದು, ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗಾಗಿ ಜನರ ಶಾಪ ಸಿಎಂಗೆ ತಟ್ಟಲಿದೆ ಎಂದರು.

ವಾಲ್ಮೀಕಿ, ಮೂಡಾ ಹಗಣರಗಳ ಕುರಿತು ಬಿಜೆಪಿಗರು, ರಾಜ್ಯಪಾಲರ ಹೇಳಿಕೆ ಬದಿಗಿಟ್ಟುಬಿಡಿ. ಹೈಕೋರ್ಟ್ ತೀರ್ಪನ್ನು ಕೂಡ ಸಿಎಂ ಗೌರವಿಸುತ್ತಿಲ್ಲ. ಸಿಎಂಗೆ ತಮ್ಮ ಸ್ವಾರ್ಥವೇ ಹೆಚ್ಚಾಗಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net