ಸಿಎಂ ಹೇಳಿಕೆಗೆ ಕುಂಚಿಟಿಗ ಶ್ರೀ ಸ್ವಾಗತ

ctd 31 kunchitiga
Published on

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ವಿಧಾನಸಭಾ ಉಪಚುನಾವಣೆ ಪ್ರಚಾರದ ವೇಳೆ ಶಿರಾದಲ್ಲಿ ಕುಂಚಿಟಿಗ ಸಮಾಜಕ್ಕೆ ಮೀಸಲು ಕೊಡುವುದಾಗಿ ಹೇಳಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಭರವಸೆಯನ್ನು ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಸ್ವಾಗತಿಸಿದ್ದಾರೆ. ಇತ್ತೀಚೆಗೆ ಶ್ರೀ ಮಠಕ್ಕೆ ಭೇಟಿ ಕೊಟ್ಟಿದ್ದ ರಾಜ್ಯಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸೇರಿದಂತೆ ಈ ಹಿಂದೆ ನಾನಾ ಕಡೆ ನಡೆದ ಸಮಾವೇಶಗಳಲ್ಲಿ ಸಿಎಂಸಹಿತ ಹಲವು ಗಣ್ಯರಿಗೆ ಮನವಿ ಸಲ್ಲಿಸಲಾಗಿತ್ತು.
ಈ ಎಲ್ಲ ಹಕ್ಕೋತ್ತಾಯಗಳಿಗೆ ಸ್ಪಂದಿಸಿರುವ ಸಿಎಂ ಸ್ಪಂದಿಸಿದ್ದು,ಇದಕ್ಕೆ ಪೂರಕವಾಗಿ ಕೂಡ ನಮ್ಮ ಬೇಡಿಕೆಗಳನ್ನು ಬೆಂಬಲಿಸಿದ್ದಾರೆ. ಇದ ರಿಂದಾಗಿ ಶ್ರೀ ಮಠ ಹಾಗೂ ಕುಂಚಿಟಿಗ ಸಮಾಜದ ಸಮಾಜದ 23 ವರ್ಷಗಳ ನಿರಂತರ ಹೋರಾಟಕ್ಕೆ ಆಶಾ ಭಾವನೆ ಮೂಡಿದೆ. ಯಡಿಯೂರಪ್ಪ ಈ ಮೊದಲು ಘೋಷಿಸಿದ್ದ ಶ್ರೀ ಮಠಕ್ಕೆ ಅನುದಾನ ಮಂಜೂರು ಮಾಡಿದ್ದರು. ಇದೀಗ ಮೀಸಲು ಸವಲತ್ತು ಕಲ್ಪಿಸುವುದಾಗಿ ಹೇಳಿದ್ದು,ಅವರು ತಮ್ಮ ಈ ಮಾತನ್ನೂ ಈಡೇರಿಸುತ್ತಾರೆ ಎಂಬ ವಿಶ್ವಾಸ ತಮಗೆ ಇದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಮಂಡನೆಯಾಗಿರುವ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಾಥಾವತ್ತಾಗಿ ಅನುಷ್ಠಾನ ಮಾಡುವ ಮೂಲಕ,ಕುಂಚಿಟಿಗ ಜಾತಿಯನ್ನು ಪ್ರವರ್ಗ ಒಂದಕ್ಕೆ ಸೇರಿಸಬೇಕು. ಈ ಬಗ್ಗೆ ಚುನಾವಣೆ ಮುಗಿದ ನಂತರ ಸಮಾಜದ ಮಠಾಧೀಶರು,ಸಂಘ ಸಂಸ್ಥೆಗಳ ಪ್ರಮುಖರ ಸಭೆ ಮುಂದೆ ಸಮಾಜ ನಡೆಯ ಕುರಿತು ನಿರ್ಣಯಿಸುವುದಾಗಿ ಶ್ರೀಗಳು ಹೇಳಿದ್ದಾರೆ.
(ಸಂಗ್ರಹ ಚಿತ್ರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net