ಸಿಎಂ, ಡಿಸಿಎಂ ವಿರುದ್ದ ಕೇಸ್ ದಾಖಲಿಸಿ / ಓಂಶಕ್ತಿ ಚಲಪತಿ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಸಂದರ್ಭದಲ್ಲಾದ ಕಾಲ್ತುಳಿತದ ಸಾವಿಗೆ ನಟ ಅಲ್ಲುಅರ್ಜುನ್‌ರನ್ನು ಬಂಧಿಸಲಾಯಿತು. ಆದರೆ ಈಗ ಆರ್‌ಸಿಬಿ ವಿಜಯೋತ್ಸವದಲ್ಲಿ ಸರ್ಕಾರದ ವೈಪಲ್ಯದಿಂದ ೧೨ ಜೀವಗಳನ್ನು ಬಲಿ ಪಡೆದಿದ್ದು, ಈ ಘಟನೆಗೆ ಅವಕಾಶ ನೀಡಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ದವೂ ಅದೇ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸರ್ಕಾರವನ್ನು ಒತ್ತಾಯಿಸಿದರು.

ಆರ್‌ಸಿಬಿ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ ಕೋಲಾರದ ಸಹನಾರ ಮೃತದೇಹದ ಅಂತಿಮ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತದಿಂದ ಸಾವು ಆದಾಗ ನಟ ಅಲ್ಲು ಅರ್ಜುನ್‌ರನ್ನು ಬಂಧಿಸಲಾಯಿತು ಎಂದರು.

ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದಿರುವ ಈ ದುರಂತಕ್ಕೆ ಸರ್ಕಾರವೇ ನೇರ ಕಾರಣವಾಗಿದೆ. ಎರಡು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದು, ವಿಧಾನಸೌಧದಲ್ಲಿ ಸಂಪುಟದ ಹಾಗೂ ತಮ್ಮ ಕುಟುಂಬಸ್ಥರ ಮಕ್ಕಳು, ಮೊಮ್ಮಕ್ಕಳ ಸೆಲ್ಪಿ ಗೀಳಿಗೆ ಜೋತು ಬಿದ್ದಿದ್ದರಿಂದಾಗಿ ಈ ಘಟನೆ ಕರಾಳತೆ ತೆರೆದುಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದರು.

ಹಿಂದೆ ಚೆನ್ನೆöÊ, ಕೊಲ್ಕತ್ತ, ಮುಂಬೈಗಳಲ್ಲಿ ಆರ್‌ಸಿಬಿ ವಿಜಯೋತ್ಸವಗಳನ್ನು ಆಚರಿಸಿದ್ದು ನೋಡಿದ್ದೇವೆ. ಅಲ್ಲಿ ಐದಾರು ದಿನ ವಿಜಯೋತ್ಸವ ಆಚರಿಸಿದ್ದರು. ಮುಂಜಾಗ್ರತೆ ವಹಿಸಿದ್ದರಿಂದ ಅಲ್ಲಿ ಯಾವುದೇ ದುರಂತ ನಡೆಯಲಿಲ್ಲ. ಆದರೆ ರಾಜ್ಯದಲ್ಲಿ ಸರ್ಕಾರದ ವೈಫಲ್ಯದಿಂದ ಘಟನೆಯಾಗಿದೆ ಎಂದರು.

ಕಾAಗ್ರೆಸ್ ರಾಜಕಾರಣಿಗಳ ಮಕ್ಕಳ ಸೆಲ್ಪಿ ಗೀಳಿಗೆ ೧೧ ಅಮಾಯಕ ಜೀವಗಳು ಬಲಿಯಾಗಿವೆ. ಇವರು ಎಷ್ಟೇ ಪರಿಹಾರ ನೀಡಿದರೂ ಜೀವ ಮರಳಿ ಬರೋದಿಲ್ಲ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮವಾಗಬೇಕು ಎಂದರು.

೪೫ ಕೋಟಿ ಜನ ಸೇರಿದ್ದ ಕುಂಭ ಮೇಳದಲ್ಲಿ ಕಾಲ್ತುಳಿತ ಘಟನೆ ಕುರಿತು ಮನಬಂದAತೆ ಮಾತನಾಡಿದ್ದ ಸಂತೋಷ್ ಲಾಡ್ ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಸಿಎಂ ಉಡಾಫೆ ಉತ್ತರ ನೀಡಿದ್ದಾರೆ. ಇದು ಮೊಂಡುತನದ ಪರಮಾವಧಿಯಾಗಿದೆ ಎಂದು ಟೀಕಿಸಿದರು.

ನಟ ಅಲ್ಲುಅರ್ಜುನ್ ವಿರುದ್ದ ದಾಖಲಿಸಿದಂತೆ ಸಿಎಂ ಮತ್ತು ಡಿಸಿಎಂ ವಿರುದ್ದವೂ ಕೇಸ್ ದಾಖಲಿಸಬೇಕು. ಮುಂದೆAದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

ಚಿತ್ರ ೦೫ ಕೆ.ಎಲ್.ಆರ್. ೦೭ : ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net