ಸಿಇಟಿ-2020 ಸೀಟು ಆಯ್ಕೆಗೆ ವೇಳಪಟ್ಟಿ ಸಿದ್ಧ

_DSC1273
Published on


ಬೆಂಗಳೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2020ನೇ ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈಗಾಗಲೇ ಕೆಇಎ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರವನ್ನು ಪ್ರಕಟಿಸಿದೆ. ಇಚ್ಛೆ ದಾಖಲಿಸಲು ನ.22ರಿಂದ 25ರವರೆಗೆ ಅವಕಾಶ ಕಲ್ಪಿಸಿದೆ. ಅಣಕು ಸೀಟು ಹಂಚಿಕೆಯ ಲಿತಾಂಶವನ್ನು ನ.26ರಂದು ಮಧ್ಯಾಹ್ನ 2ಗಂಟೆಗೆ ಬಿಡುಗಡೆ ಮಾಡಲಿದೆ. ಆಯ್ಕೆಗಳನ್ನು ಬದಲಾಯಿಸಲು ನ.26ರಿಂದ 28ರವರೆಗೆ ಅವಕಾಶ ನೀಡಿದೆ. ನೈಜ ಸೀಟು ಹಂಚಿಕೆಯ ಲಿತಾಂಶವನ್ನು ನ.29ರಂದು ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಿದೆ. ಆನಂತರ ಸೀಟು ಖಚಿತತೆಯನ್ನು ಆಯ್ಕೆ ಮಾಡಲು ನ.30ರಿಂದ ಡಿ.1ರವರೆಗೆ ಅವಕಾಶ ನೀಡಿದೆ. ಆಯ್ಕೆ -1 ಮಾಡಿದವರಿಗೆ ಶುಲ್ಕ ಪಾವತಿಸಲು ನ.30ರಿಂದ ಡಿ.2ರವರೆಗೆ ಅವಕಾಶ ಕಲ್ಪಿಸಿದೆ. ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನ ಡಿ.2 ಆಗಿದೆ.
ಶುಲ್ಕದ ಪಟ್ಟಿ ಸಹ ಬಿಡುಗಡೆ ಮಾಡಿದ್ದು, ಸರ್ಕಾರಿ ಮತ್ತು ಅನುದಾನಿತ ಕಾಲೇಜಿನಲ್ಲಿ(ಸಾಮಾನ್ಯ ವರ್ಗ)19,090 ರೂ, ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟ 58,806 ರೂ. ಮತ್ತು 65,340 ರೂ. ಇದೆ. ಇನ್ನೂ ಸೂಪರ್ ನ್ಯೂಮರಿ ಕೋಟಾದ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲೂ 4,090 ರೂ., ಡಿ.ಾರ್ಮ ಮತ್ತು ಾರ್ಮ ಡಿ. ಕೋರ್ಸ್‌ಗಳಗಿಎ 14,030 ರೂ., ಮತ್ತು ಖಾಸಗಿ ಕಾಲೇಜಿನಲ್ಲಿ 24,000 ರೂ.ನಿಗದಿ ಪಡಿಸಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಠಿಠಿ://್ಚಛಿಠಿಟ್ಞ್ಝಜ್ಞಿಛಿ.ಚ್ಟ್ಞಠಿ.ಜಟ.ಜ್ಞಿ/ಛಿ/್ಚಛಿಠಿ2020 ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net