ಸಿ.ಟಿ ರವಿ ವಜಾಗೆ ಪಂಚಮಸಾಲಿ ಸಮುದಾಯದಿಂದ ಒತ್ತಾಯ

06
Published on

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ವಿ.ಪ ಸದಸ್ಯ ಸಿ.ಟಿ ರವಿ ಕಲಾಪದ ವೇಳೆ ಅವಹೇಳನಕಾರಿ ಪದ ಬಳಸಿರುವುದನ್ನು ಲಿಂಗಾಯತ ಪಂಚಮಸಾಲಿ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಸಿ.ಟಿ ರವಿ ಅವರನ್ನು ವಿ.ಪ ಸದಸ್ಯ ಸ್ಥಾನದಿಂದ ವಜಾ ಮಾಡುವಂತೆ ಪಂಚಮಸಾಲಿ ಸಮುದಾಯದ ಮುಖಂಡ ಗುಂಡು ಪಾಟೀಲ ಆಗ್ರಹಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಕರ ಚಾವಡಿ ಎಂದೇ ಕರೆಯುವ ವಿಧಾನ ಪರಿಷತ್ ಕಲಾಪದ ವೇಳೆ ವಿ.ಪ ಸದಸ್ಯ ಸಿ.ಟಿ ರವಿ ಸಚಿವೆ ಹೆಬ್ಬಾಳ್ಕರ್ ಬಗ್ಗೆ ಅಗೌರವದಿಂದ ಮಾತನಾಡುವ ಮೂಲಕ ಸಿ ಕುಲಕ್ಕೆ ಅವಮಾನ ಮಾಡಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಿಂದೆ ಇಡೀ ಪಂಚಮಸಾಲಿ ಸಮುದಾಯವಿದೆ. ಸಿ.ಟಿ ರವಿ ಕೂಡಲೇ ಕ್ಷಮೆಯಾಚಿಸಬೇಕು ಎಂದರು. ಶಿವಾನಂದ ತಂಬಾಕೆ, ಆರ್.ಪಿ ಪಾಟೀಲ, ವಿಜಯ ಪಾಟೀಲ, ಅಡಿವೇಶ ಇಟಗಿ. ಚಿದಾನಂದ ಜಕಾತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net