

ಬಳ್ಳಾರಿ:ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸಹೋದರಿಬ್ಬರು ಸಾವಿನಲ್ಲಿ ಒಂದಾದ ದುರಂತ ಘಟನೆ ನಡೆದಿದೆ.ಕೆ.ಸಿದ್ದೇಶ(22) ಎನ್ನುವ ಯುವಕ ಕೈಗಾರಿಕೆ ಇಂಡಷ್ಟ್ರಿಯೊಂದರಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ.ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ.ಬಿಪಿ ಜಾಸ್ತಿಯಾಗಿ ಸಿದ್ದೇಶ ಮೃತಪಟ್ಟಿದ್ದಾನೆ.
ಈ ಸುದ್ದಿ ತಿಳಿದ ಬೆಂಗಳೂರಿನಲ್ಲಿ ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರ ದೊಡ್ಡಬಸವ(25)ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ್ದಾನೆ.ತಮ್ಮನ ವಿಧಿ-&ವಿಧಾನ ಕಾರ್ಯ ಮುಗಿಯುವರೆಗೂ ಜತೆಗಿದ್ದು, ಸ್ಮಶಾನದಿಂದ ಮರಳಿ ಮನೆಗೆ ಬರುವ ಸಮಯದಲ್ಲಿ ಈ ಯುವಕನಿಗೆ ಹೃದಯಘಾತವಾಗಿದೆ.ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ.
ಗ್ರಾಮದ ಬಸಪ್ಪ ಮತ್ತು ದುರ್ಗಮ್ಮ ದಂಪತಿಗಳ ಮಕ್ಕಳಾಗಿದ್ದು, ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ.ಈ ಪೈಕಿ ಇವರ ಹಿರಿಯ ಮಗ ಕೆಂಚಪ್ಪ ಎಂಬಂತಾನು ತಮ್ಮಂದಿರನ್ನು ಕಳೆದುಕೊಂಡಿರುವ ದು:ಖದಲ್ಲಿ ಚಿಂತಾಕ್ರಾಂತನಾಗಿದ್ದಾನೆ.ಆರೋಗ್ಯದಲ್ಲಿ ಏರುಪೇರಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ.ಅದರಲ್ಲೂ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ.ವ್ಯವಸಾಯ ನಂಬಿ ಜೀವನ ಸಾಗಿಸುತ್ತಿರುವ ಈ ದಂಪತಿಗೆ ಮಕ್ಕಳೇ ಆಧಾರವಾಗಿದ್ದರು.ಆದರೆ, ಜವರಾಯ ಮೂವರು ಸಹೋದರಲ್ಲಿ ಇಬ್ಬರನ್ನು ಒಂದೇ ದಿನ ಬಲಿ ಪಡೆದು ಕುಟುಂಬಕ್ಕೆ ಆಘಾತ ನೀಡಿದ್ದಾನೆ.