ಸಾವಿನ ದರ ಶೇ.0.9ಕ್ಕೆ ಇಳಿಕೆ * ಸತತ 17ನೇ ದಿನವೂ ಏರಿಕೆಯತ್ತ ಗುಣಮುಖರ ಸಂಖ್ಯೆ

corona images
Published on

ಬೆಂಗಳೂರು: ಕರೊನಾ ಸೋಂಕಿತರ ಹಾಗೂ ಮೃತರ ಸಂಖ್ಯೆ ಶನಿವಾರ ತೀವ್ರ ಇಳಿಮುಖವಾಗಿದ್ದು, 3,014 ಹೊಸ ಸೋಂಕು ಪ್ರಕರಣ ವರದಿಯಾಗಿದೆ. ಸೋಂಕಿತರ ಸಂಖ್ಯೆ 8.23 ಲಕ್ಷಕ್ಕೆ ತಲುಪಿದ್ದು, ದಿನದ ಸೋಂಕಿತರ ದರ ಶೇ.2.96ಕ್ಕೆ ಇಳಿಕೆಯಾಗಿದೆ.

ಮೂರು ತಿಂಗಳಲ್ಲಿ ಶನಿವಾರದ 3,014 ಸೋಂಕಿತರ ಸಂಖ್ಯೆ ಅತಿ ಕಡಿಮೆಯಾಗಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 28 ಸೋಂಕಿತರು ಸಾವನ್ನಪ್ಪಿದ್ದು, 3 ತಿಂಗಳ ನಂತರ ಅತಿ ಕಡಿಮೆ ಸಾವಿನ ವರದಿಯಾಗಿದೆ. ಸಾವಿನ ದರ ಶೇ.0.92ಕ್ಕೆ ಇಳಿಕೆಯಾಗಿದ್ದು, ಒಟ್ಟು ಮೃತರ ಸಂಖ್ಯೆ 11,168ಕ್ಕೆ ತಲುಪಿದೆ. 7,468 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸತತ 17ನೇ ದಿನವೂ ಗುಣಮುಖರ ಸಂಖ್ಯೆ ಸೋಂಕಿತ ಪ್ರಕರಣಗಳನ್ನು ಮೀರಿಸಿದೆ. ಚೇತರಿಕೆ ಪ್ರಮಾಣ ಶೇ.91.95ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 55,017ಕ್ಕೆ ಕುಸಿದಿದೆ. ಸೋಂಕಿತರಲ್ಲಿ ಹಲವರು ನಾನಾ ಆಸ್ಪತ್ರೆ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದು, 956 ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net