ಸಾಲು ಸಾಲು ರಜೆ ಹಂಪಿಗೆ ಪ್ರವಾಸಿಗರು

16 MANJU 04
Published on

ಹೊಸಪೇಟೆ : ಎರಡನೇ ಶನಿವಾರ, ವಾರದ ರಜೆ ಭಾನುವಾರ ಜತೆಗೆ ಸೋಮವಾರ ಈದ್ ಮಿಲಾದ್ ನಿಮಿತ್ತ ರಜೆ ಇರುವುದರಿಂದ ಕಳೆದ ಮೂರು ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬಂದಿದ್ದಾರೆ.

ಅದರಲ್ಲೂ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಪ್ರವಾಸಿಗರು ಹರಿದು ಬಂದಿದ್ದಾರೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ ವೀಕ್ಷಣೆಗೆ ಶನಿವಾರ 8 ಸಾವಿರ ಕ್ಕೂ ಅಧಿಕ ಜನ ಬಂದಿದ್ದು, ಭಾನುವಾರ 20 ಸಾವಿರ ಕ್ಕೂ ಅಧಿಕಾ ಜನ ಹರಿದು ಬಂದಿದ್ದಾರೆ. ವಿಜಯವಿಠಲ ದೇಗುಲಕ್ಕೆ ಬ್ಯಾಟರಿ ಚಾಲಿತ ವಾಹನಗಳು ಕೊರತೆಯಿಂದ ನಡೆದುಕೊಂಡೆ ಪ್ರವಾಸಿಗರು ಕಲ್ಲಿನ ರಥ, ಸಂಗಿತ ಮಂಟಪ ವೀಕ್ಷಣೆ ಮಾಡಿದರು. ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪ ಮಂಟಪ, ಕಡಲೆ ಕಾಳು ಗಣೇಶ ಮಂಟಪ, ಶ್ರೀ ಕೃಷ್ಣ ದೇಗುಲ, ಹಜಾರ ರಾಮ ದೇಗುಲ, ಆನೆಲಾಯ, ಕಮಲ ಮಹಲ್, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನತೇರು, ಪುರಂದರ ಮಂಟಪ, ವರಾಹ ದೇಗುಲ, ರಾಮ, ಲಕ್ಷ್ಮಣ ದೇಗುಲ, ಸುಗ್ರೀವ ಗುಹೆ ಸೇರಿದಂತೆ ನಾನಾ ದೇಗುಲ ಸ್ಮಾರಕಗಳನ್ನು ವೀಕ್ಷಿಸಿದರು.

ಹಂಪಿಯ ಸ್ಮಾರಕಗಳ ಸೊಬಗನ್ನು ವೀಕ್ಷಿಸಿದ ಪ್ರವಾಸಿಗರು ಸ್ಮಾರಕಗಳ ಬಗ್ಗೆ ಹಾಗೂ ವಿಜಯನಗರ ಚರಿತ್ರೆಯನ್ನು ಮಾರ್ಗದರ್ಶಕರಿಂದ ಮಾಹಿತಿ ಪಡೆದರು. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬೆಂಗಳೂರಿನಿAದ ಬಂದಿದ್ದೇವೆ. ವೀಕೆಂಡ್ ಹಿನ್ನೆಲೆ ಬಂದಿದ್ದೇವೆ. ಫ್ರೆಂಡ್ಸ್ ಜತೆ ಬೈಕ್‌ನಲ್ಲಿ ಬಂದಿರುವೆ. ಎಂಟು ಜನರ ತಂಡ ಬಂದಿದ್ದೇವೆ ಎಂದು ಪ್ರವಾಸಿ ಸುಭಾಷ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net