ಸಾಲ ಮನ್ನಾದಿಂದ ರೈತರು ಪಡೆದದ್ದೇನು?

Published on

ಹುಕ್ಕೇರಿ: ರಾಜ್ಯ ಸರ್ಕಾರ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡೆದ ಸಾಲವನ್ನು ನಾಲ್ಕು ಬಾರಿ ಮನ್ನಾ ಮಾಡಿದೆ. ರೈತರು ಸಾಲಮನ್ನಾ ಭಾಗ್ಯದಿಂದ ಜಮೀನು ಖರೀದಿಸಿದರೆ, ಮನೆ ಕಟ್ಟಿಕೊಂಡರೆ ಅಥವಾ ಮತ್ಯಾವುದಾದರೂ ಘನ ಉದ್ದೇಶಕ್ಕೆ ಬಳಸಿದರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ  ರಮೇಶ ಕತ್ತಿ ಹೇಳಿದರು.

ಬೆಳವಿ ಗ್ರಾಮದ ಗುಡದವ್ವದೇವಿ ವಿವಿಧೋದ್ದೇಶ ಪಿಕೆಪಿಎಸ್ ಸಂಘದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಸತ್ಯಪ್ಪ ನಾಯಿಕ, ರಮೇಶ ಕುಲಕರ್ಣಿ, ಬಸವರಾಜ ಮರಡಿ, ಪಾರ್ವತಿ ಚಿಕ್ಕಣಗಿ ಇತರರಿದ್ದರು,  
ಬೆಳವಿ ಗ್ರಾಮದ ಗುಡದವ್ವದೇವಿ ವಿವಿಧೋದ್ದೇಶ ಪಿಕೆಪಿಎಸ್ ಸಂಘದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಸತ್ಯಪ್ಪ ನಾಯಿಕ, ರಮೇಶ ಕುಲಕರ್ಣಿ, ಬಸವರಾಜ ಮರಡಿ, ಪಾರ್ವತಿ ಚಿಕ್ಕಣಗಿ ಇತರರಿದ್ದರು,  

ತಾಲೂಕಿನ ಬೆಳವಿ ಗ್ರಾಮದ ಗುಡದವ್ವದೇವಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಿಂದ ಗುರುವಾರ ಏರ್ಪಡಿಸಿದ್ದ 2023-24 ಮತ್ತು 2025-26ರ ಸಾಲಿನ ಸಾಲ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದ ಸಾಲ ಹೆಚ್ಚಳ ಮಾಡುವುದಕ್ಕಿಂತ ರೈತರನ್ನು ಸೋಲಾರ್ ವಿದ್ಯುತ್ ಉತ್ಪಾದನೆಯೆಡೆಗೆ ಸೆಳೆದರೆ 12 ತಾಸು ನೀರಾವರಿ ಕೈಗೊಳ್ಳಬಹುದು. ಈಗಾಗಲೇ ಸಹಕಾರಿ ಸಚಿವರ ಎದುರು ವಿಷಯ ಪ್ರಸ್ತಾಪಿಸಿದ್ದೇನೆ ಎಂದರು.

ಸಂಘದ ಅಧ್ಯಕ್ಷ ಸತ್ಯಪ್ಪ ನಾಯಿಕ ಮಾತನಾಡಿ, 359 ಜನರಿಗೆ 3.24 ಕೋಟಿ ರೂ.ಸಾಲ ವಿತರಿಸಲಾಗುತ್ತಿದೆ. ಪ್ರಸಕ್ತ ವರ್ಷ 10 ಲಕ್ಷ ರೂ. ಲಾಭ ಆಗಿದೆ. ಸಂಘದಿಂದ ರಾಸಾಯನಿಕ ಗೊಬ್ಬರ, ಬೀಜ ವಿತರಣೆ ಮಾಡಲಾಗಿದೆ ಎಂದರು. ಪತ್ತು ವಿತರಿಸಲಾಯಿತು. ಸಂಘದಿಂದ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು.

ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಮೇಶ ಕುಲಕರ್ಣಿ, ಹಿರಾ ಶುಗರ್ಸ್‌ ನಿರ್ದೇಶಕ ಬಸವರಾಜ ಮರಡಿ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಚಿಕ್ಕಣಗಿ, ಉಪಾಧ್ಯಕ್ಷೆ ಶೋಭಾ ಘಸ್ತಿ, ಮಹಾದೇವ ಕ್ಷೀರಸಾಗರ, ಅಶೋಕ ಖಾನಾಯಿ, ಡಿಸಿಸಿ ಬ್ಯಾಂಕ್ ನಿರೀಕ್ಷಕ ಮಂಜುನಾಥ ಹಡಾಡಿ, ಸಂಘದ ಉಪಾಧ್ಯಕ್ಷ ಪುಂಡಲೀಕ ಪಾಟೀಲ, ನಿರ್ದೇಶಕರಾದ ಹೊನ್ನಪ್ಪ ನಾಯಿಕ, ಎಸ್.ಆರ್.ಕರ್ಕಿನಾಯಿಕ, ಕಾಂತಪ್ಪ ಹಡಗಿನಾಳ, ಚನ್ನಮಲ್ಲ ನಾಯಿಕ, ನಿಂಗೌಡ ಮಗದುಮ್ಮ, ಅಶೋಕ ಘಸ್ತಿ, ಅಪ್ಪಾಸಾಹೇಬ ನದ್ಾ, ಸಿಇಒ ಮಹಾಂತೇಶ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net