ವಿಜಯವಾಣಿ ಸುದ್ದಿಜಾಲ ಕೋಲಾರ
ಸಾರ್ವಜನಿಕರನ್ನು ವಿವಿಧ ರೀತಿಯಲ್ಲಿ ಯಾಮಾರಿಸಿ ಕೋಟ್ಯಾಂತರ ರೂ.ಗಳ ವಂಚನೆ ಮಾಡಿ, ತಲೆಮರೆಸಿಕೊಂಡಿದ್ದ ಐವರ ಪತ್ನಿಯರ ಮುದ್ದಿನ ಗಂಡನನ್ನು ಕೋಲಾರ ಗಲ್‌ಪೇಟೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ನಗರದ ಮಹಾಲಕ್ಷಿö್ಮÃ ಬಡಾವಣೆಯ ನಿವಾಸಿ ಸೈಯದ್ ಮೌಲ (೪೫), ವಿಜಯವಾಡ, ಹೈದರಾಬಾದ್, ಅನಂತಪುರ, ಚಿಕ್ಕಬಳ್ಳಾಪುರ ಮುಂತಾದ ಕಡೆ ರಿಯಲ್ ಎಸ್ಟೇಟ್ ಮಾಡಿಕೊಂಡು ಸ್ಥಿತಿವಂತರನ್ನು ಹುಡುಕಿ ಅವರಿಂದ ಹಣ ಪಡೆದು ಬರುವ ಲಾಭಾಂಶದಲ್ಲಿ ನಿಮಗೂ ಪಾಲುಗಾರಿಕೆ ಇದೆ ಎಂದು ವಾತಾವರಣ ಸೃಷ್ಟಿಸಿ ಹಲವರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಎನ್ನಲಾಗಿದೆ.
ಈತನ ಮಾತುಗಳಿಗೆ ಬೆರಗಾದ ಕೋಲಾರ ನಗರದ ಕಿಲಾರಪೇಟೆಯ ಇಮ್ರಾನ್‌ಖಾನ್ ಎಂಬಾತ ೨೦೨೦ ರಿಂದ ೨೦೨೨ರ ವರವಿಗೂ ಸೈಯದ್ ಮೌಲಾನ ಜೊತೆಯಲ್ಲಿ ವ್ಯವಹಾರ ನಡೆಸಿ, ಆತನಿಗೆ ಸುಮಾರು ದಾಖಲೆಗಳ ಪ್ರಕಾರ ೩೦ ಲಕ್ಷ ಹಣವನ್ನು ಖಾತೆಗೆ ವರ್ಗಾಯಿಸಿದ್ದಾನೆ. ಆದರೆ ಯಾವುದೇ ಲಾಭಾಂಶ ನೀಡದ ಕಾರಣ ಅನುಮಾನಗೊಂಡ ಇಮ್ರಾನ್‌ಖಾನ್ ಆತನ ಚಲನವಲನಗಳ ಮೇಲೆ ಕಣ್ಣಿಟ್ಟು ಹಣ ವಾಪಸ್ ನೀಡುವಂತೆ ಬೆನ್ನು ಬಿದ್ದಿದ್ದಾನೆ.
ಹಣ ವಾಪಸ್ ನೀಡುವುದಾಗಿ ಇಮ್ರಾನ್‌ಖಾನ್‌ನನ್ನು ಮೌಲಾನ ಹೈದರಾಬಾದ್, ವಿಜಯವಾಡ ಮುಂತಾದ ಕಡೆ ಕರೆದೊಯ್ದು ಒಂದೆರಡು ದಿನ ಜೊತೆಯಲ್ಲೇ ಇಟ್ಟುಕೊಂಡು ನಂತರ ಸೈಯದ್ ಮೌಲ ಪರಾರಿಯಾಗುತ್ತಿದ್ದ. ಈ ಬಗ್ಗೆ ಇಮ್ರಾನ್‌ಖಾನ್ ೦೫.೦೨.೨೦೨೪ ರಂದು ಕೋಲಾರ ಗಲ್‌ಪೇಟೆ ಪೋಲಿಸ್ ಠಾಣೆಯಲ್ಲಿ ಸೈಯದ್ ಮೌಲನ ವಿರುದ್ಧ ದೂರು ನೀಡುತ್ತಾನೆ. ಗಲ್‌ಪೇಟೆ ಪೋಲಿಸರು ದೂರು ದಾಖಲಿಸಿಕೊಂಡು ತೀವ್ರ ತಪಾಸಣೆ ನಡೆಸಿದ್ದರೂ ವಂಚಕ ಸೈಯದ್ ಮೌಲ ಪೋಲಿಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿರುತ್ತಾನೆ.
ಸೈಯದ್ ಮೌಲ ರವರ ಭಾವ ಮೊಹ್ಮದ್ ಗೌಸ್ (೫೦) ಎಂಬುವವನು ಸಹ ಈ ಪ್ರಕರಣದಲ್ಲಿ ಶಾಮೀಲಾಗಿದ್ದು, ಇಬ್ಬರೂ ಒಂದೇ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಜಿಲ್ಲೆಯ ಶ್ರೀನಿವಾಸಪುರದ ರಾಯಲ್ಪಾಡು ಬಳಿ ಸೈಯದ್ ಮೌಲ ಇರುವ ವಿಷಯ ಇಮ್ರಾನ್‌ಖಾನ್ ಪೋಲಿಸರಿಗೆ ತಿಳಿಸುತ್ತಾನೆ. ಆಗ ಪೋಲಿಸರು ಸೈಯದ್ ಮೌಲನನ್ನು ಹಿಡಿಯಲು ಬೆನ್ನಟ್ಟಿದ್ದಾಗ ನನ್ನನ್ನು ಅಪಹರಿಸಲು ಬಂದಿದ್ದಾರೆ ಎಂದು ಅಲ್ಲಿನ ಪೋಲಿಸರಿಗೆ ಸುಳ್ಳು ಮಾಹಿತಿ ನೀಡಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿತ್ತಾನೆ.
ಗಲ್‌ಪೇಟೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಬಿ.ಲೋಕೇಶ್ ಮಾರ್ಗದರ್ಶನದಲ್ಲಿ ಸಬ್‌ಇನ್ಸ್ಪೆಕ್ಟರ್ ವೈ.ಟಿ.ವಿಠಲ್, ರಾಜೇಶ್, ಸದಾನಂದ ಹಾಗೂ ಇತರರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ತಲೆ ಮರೆಸಿಕೊಂಡಿದ್ದ ಸೈಯದ್ ಮೌಲ ಹಾಗೂ ಮೊಹ್ಮದ್ ಗೌಸ್ ರವರನ್ನು ಮೂರು ದಿನಗಳ ಹಿಂದೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಸೈಯದ್ ಮೌಲ ಸ್ವಲ್ಪ ಮಟ್ಟಿಗೆ ವಿಕಲಚೇತನ ಆಗಿದ್ದು, ಅದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಯಾಮಾರಿಸುವಲ್ಲಿ ನಿಸ್ಸೀಮ ಆಗಿರುತ್ತಾನೆ. ಗಲ್‌ಪೇಟೆ ಪೋಲಿಸರು ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸೈಯದ್ ಮೌಲಾಗೆ ೫ ಜನ ಹೆಂಡತಿಯರಿದ್ದು, ಸಾರ್ವಜನಿಕರನ್ನು ವಂಚಿಸುವುದೇ ಈತನ ಕಾಯಕ ಎಂಬುದು ಬೆಳಕಿಗೆ ಬಂದಿದೆ.
ಸಾರ್ವಜನಿಕರಿಂದ ವಂಚಿಸಿ ಬಂದ ಹಣದಲ್ಲಿ ಪತ್ನಿಯರೊಂದಿಗೆ ಪ್ರವಾಸ ತೆರಳಿ ಮೋಜು ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ. ಸೈಯದ್ ಮೌಲ ಚಿಂತಾಮಣಿ ತಾಲ್ಲೂಕಿನ ತಳವಾರ ಗ್ರಾಮದವನಾಗಿದ್ದು, ಪ್ರಸ್ತುತ ಕೋಲಾರದ ಮಹಾಲಕ್ಷಿö್ಮÃ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಶಿಡ್ಲಘಟ್ಟ, ಕೋಲಾರ, ವಿಜಯವಾಡ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿದೆಡೆ ಮದುವೆಯಾಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇವನ ಬಾವ ಮೊಹ್ಮದ್ ಗೌಸ್ ಶಿಡ್ಲಘಟ್ಟ ಗ್ರಾಮದವನು ಆಗಿದ್ದಾನೆ.
ಚಿತ್ರ ೧೨ ಕೆ.ಎಲ್.ಆರ್. ೦೨ : ಸೈಯದ್ ಮೌಲ ಭಾವಚಿತ್ರ
ಚಿತ್ರ ೧೨ ಕೆ.ಎಲ್.ಆರ್. ೦೨ಎ : ಮೊಮ್ಮದ್ ಗೌಸ್ ಭಾವಚಿತ್ರ