ಸಾರ್ವಜನಿಕರ ಮತ್ತು ಪೋಲಿಸರ ನಿದ್ದೆಗೆಡಿಸಿದ್ದ ನಾಲ್ವರು ಡಕಾಯಿತರ ಬಂಧನ/ ೧೭೫ ಗ್ರಾಂ ಚಿನ್ನ ಮತ್ತು ೧೦,೦೦೦ ನಗದು ವಶ

Published on

ತಾಲ್ಲೂಕಿನ ಸಿಬಿಐಟಿ ಕಾಲೇಜು ಸೇರಿದಂತೆ ಮನೆಗಳ್ಳತನ, ಬಸ್ಸುಗಳಲ್ಲಿ ಪಿಕ್ ಪಾಕೆಟ್, ದೇವಸ್ಥಾನದ ಹುಂಡಿ ಕಳ್ಳತನ ಮುಂತಾದ ಸರಣಿ ಕಳ್ಳತನಗಳನ್ನು ಮಾಡಿ ಸಾರ್ವಜನಿಕರ ನಿದ್ದೆ ಕೆಡಿಸಿದ್ದ ನಾಲ್ಕು ಕದೀಮರನ್ನು ಕೋಲಾರ ಜಿಲ್ಲಾ ಅಪರಾಧ ದಳ ಮತ್ತು ನಗರ ಠಾಣೆ ಪೋಲಿಸರು ಬಂಧಿಸಿ ಅವರಿಂದ ೧೭೫ ಗ್ರಾಂ. ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಕೋಲಾರ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವರದಿಯಾಗುತ್ತಿದ್ದ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಎಸ್.ಪಿ.ನಾರಾಯಣ್ ರವರ ನೇತೃತ್ವದಲ್ಲಿ ಪಿ.ಎಸ್.ಐ.ಅಣ್ಣಯ್ಯ ಹಾಗೂ ಕ್ರೆöÊಂ ಸಿಬ್ಬಂದಿಯೊAದಿಗೆ ತಂಡ ರಚಿಸಲಾಗಿತ್ತು.

ಆಗಸ್ಟ್ ೨೯ ರಂದು ಮಧ್ಯರಾತ್ರಿ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖಾದರ್ ಬಾಷಾ ಅಲಿಯಾಸ್ ತೋಟಕನ ಬಾಬು ಹಾಗೂ ೪ ಜನ ಸಹಚರರು ಕೋಲಾರ ನಗರದ ಬೆಥೆಲ್ ನಗರದ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಮಾರಕಾಸ್ತç ತೋರಿಸಿ ವಾಹನ ಸವಾರರನ್ನು ಬೆದರಿಸಿ ಡಕಾಯಿತಿ ಮಾಡಲು ಪ್ರಯತ್ನಿಸುತ್ತಿದ್ದ ಮಾಹಿತಿ ಆಧರಿಸಿ, ಜಿಲ್ಲಾ ಅಪರಾಧ ಪತ್ತೆ ತಂಡವು ಕಾರ್ಯಪ್ರವೃತ್ತರಾಗಿ ಡಕಾಯಿತರ ಗುಂಪಿನ ಮೆಲೆ ದಾಳಿ ಮಾಡಿದರು.

ಆಗ ಮುಳಬಾಗಿಲು ನಗರದ ಹೊಸಪಾಳ್ಯದ ವಾಸಿ ಶಂಕರ ಅಲಿಯಾಸ್ ಅಡುಗೆ ಶಂಕರ, ಬಂಗಾರಪೇಟೆ ತಾಲ್ಲೂಕು ಕಣ್ಣಿಂಬೆಲೆ ವಾಸಿ ವೆಂಕಟೇಶ ರವರನ್ನು ವಶಕ್ಕೆ ಪಡೆದು ಅವರ ಬಳಿ ದೊರೆತ ಕಬ್ಬಿಣದ ರಾಡು, ಕಟ್ಟರ್, ಸ್ಪಾನರ್, ಹ್ಯಾಂಡ್ ಗ್ಲೌಸು, ಮಾಸ್ಕ್, ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು.

ದಾಳಿಯ ವೇಳೆ ಪ್ರಮುಖ ಆರೋಪಿ ಮುಳಬಾಗಿಲು ತಾಲ್ಲೂಕು ಮರಹೇರು ಗ್ರಾಮದ ವಾಸಿ ಖಾದರ್ ಪಾಷಾ ಅಲಿಯಾಸ್ ತೋಟಕನ ಬಾಬು, ಕೋಲಾರ ನಗರದ ವಾಸಿ ಅದಿಲ್ ಪಾಷಾ ಹಾಗೂ ಹೊಲ್ಲಂಬಳ್ಳಿ ಗ್ರಾಮದ ವಾಸಿ ಚರಣ್ ರಾಜ್ ಪರಾರಿಯಾಗಿದ್ದರು. ಸೆ.೪ ರಂದು ಬೆಳಿಗ್ಗೆ ತಲೆ ಮರೆಸಿಕೊಂಡಿದ್ದ ತೋಟಕನ ಬಾಬು ಮತ್ತು ಚರಣ್ ರಾಜ್ ನನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾದರು.

ಬಂಧಿತ ಆರೋಪಿತರನ್ನು ಹೆಚ್ಚಿನ ತನಿಖೆಗೊಳಪಡಿಸಿ ಅವರಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕಳುವಾಗಿದ್ದ ೫ ಪ್ರಕರಣಗಳಲ್ಲಿ ಮತ್ತು ಅರಾಭಿಕೊತ್ತನೂರು ಗ್ರಾಮದ ದೇವಸ್ಥಾನದ ಹುಂಡಿ ಕಳ್ಳತನ ಹಾಗೂ ಸಿಬಿಐಟಿ ಕಲೇಜಿನಲ್ಲಿ ಜರುಗಿದ್ದ ನಗದು ಹಣ ಕಳ್ಳತನ ಪ್ರಕರಣ ಪತ್ತೆಯಾಗಿದ್ದು, ಬಂಧಿತರಿAದ ೧೭೫ ಗ್ರಮ ಚಿನ್ನ ಹಾಗೂ ೧೦,೦೦೦ ರೂ.ಗಳ ನಗದನ್ನು ವಶಪಡಿಸಿಕೊಂಡಿದ್ದಾರೆ. ತಲೆಮರಿಸಿಕೊಂಡಿರುವ ಇನ್ನೋರ್ವ ಆರೋಪಿ ಅದಿಲ್ ಪಾಷ ನ ಬಂಧಿಸಲು ಬಲೆ ಬೀಸಲಾಗಿದೆ.

ಈ ಕಾರ್ಯಾಚರಣೆಯಲ್ಲಿದ್ದ ಕೋಲಾರ ನಗರ ಠಾಣೆಯ ಪಿ.ಐ. ಆರ್. ಹರೀಶ್ ಜಿಲ್ಲಾ ಅಪರಾಧ ಪತ್ತೆ ದಳದ ಪಿ.ಎಸ್.ಐ. ಶ್ರೀ ಅಣ್ಣಯ್ಯ ಸಿಬ್ಬಂದಿಯವರಾದ ಹೆಚ್.ಸಿ.ರಾಘವೇಂದ್ರ, ಜಿ.ವಿ. ಹೆಚ್.ಸಿ.ಆಂಜಿನಪ್ಪ, ಹೆಚ್.ಸಿ. ಎಂ.ರಮೇಶ್, ಪಿ.ಸಿ. ವಿನಾಯಕ, ಪಿ.ಸಿ. ರಾಜೇಶ್, ಜಿಲ್ಲಾ ಪೋಲಿಸ್ ಕಛೇರಿಯ ತಾಂತ್ರಿಕ ವಿಭಾಗದ ಹೆಚ್.ಸಿ. ಟಿ.ಎ. ನಾಗರಜ್ ರವರ ತಂಡವನ್ನು ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಐಪಿಎಸ್ ರವರು ಶ್ಲಾಘಿಸಿದ್ದಾರೆ.

ಚಿತ್ರ ೦೫ ಕೆ.ಎಲ್.ಆರ್. ೦೬ : ಕೋಲಾರ ಜಿಲ್ಲಾ ಅಪರಾಧ ಪೋಲಿಸರು ಮತ್ತು ನಗರ ಠಾಣೆ ವತಿಯಿಂದ ನಡೆದ ಕಾರ್ಯಚರಣೆಯಿಂದ ಬಂಧಿಸಿರುವವರ ನಾಲ್ಕು ಡಕಾಯಿತರ ಭಾವಚಿತ್ರಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net