

ಕಡೂರು: ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಪಟ್ಟಣದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿಎಚ್‌ಪಿ ಹಾಗೂ ಬಜರಂಗದಳದಿಂದ ಸಾಮೂಹಿಕವಾಗಿ ಶಿವ ಪಂಚಾಕ್ಷರಿ ಜಪ ನೆರವೇರಿಸಿದರು.
ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಮಂಜುನಾಥ್ ಜೈನ್ ಮಾತನಾಡಿ, ಹಿಂದುಗಳ ಶ್ರದ್ಧಾಕೇಂದ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ವ್ಯವಸ್ಥಿತ ಷಡ್ಯಂತ್ರಗಳು ದೂರವಾಗಿ ಕ್ಷೇತ್ರದ ಬಗ್ಗೆ ಶ್ರದ್ಧೆ ಭಕ್ತಿ ಹೆಚ್ಚಾಗಲಿ ಎಂಬ ಸಂಕಲ್ಪದೊಂದಿಗೆ ಸಾಮೂಹಿಕ ಶಿವ ಪಂಚಾಕ್ಷರಿ ಜಪ ಮಾಡಲಾಗಿದೆ. ಶ್ರೀಕ್ಷೇತ್ರಕ್ಕೆ ಧಕ್ಕೆ ತರುತ್ತಿರುವ ವಿರುದ್ಧ ನ್ಯಾಯದ ತೀರ್ಪನ್ನು ಸ್ವಾಮಿಯು ನೀಡುವ ನಂಬಿಕೆ ಆಧಾರದಲ್ಲಿ ಹಿಂದು ಸಮಾಜ ಗಟ್ಟಿಯಾಗಿದೆ. ಧಾರ್ಮಿಕ ಕೇಂದ್ರದ ಮೇಲೆ ಭಕ್ತರಲ್ಲಿ ಯಾವುದೇ ಅಪನಂಬಿಕೆ ಬರಬಾರದು ಎಂಬ ಕಾರಣಕ್ಕೆ ರಾಜ್ಯಾದ್ಯಂತ ಕರೆಕೊಟ್ಟಿರುವ ವಿಎಚ್‌ಪಿ ತಾಲೂಕು ಕೇಂದ್ರದಲ್ಲಿ ಇದನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಶಿವನ ದೇವಾಲಯಗಳಲ್ಲಿ ಜಪ ಆಚರಣೆಗಳ ಮೂಲಕ ಭಕ್ತಿಯ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದರು.
ಬಜರಂಗದಳದ ನಗರ ಸಂಯೋಜಕ ಶ್ರೀಕಾಂತ್, ಸಹ ಸಂಯೋಜಕ ಯೋಗೀಶ್ ಪೂಜಾರಿ, ವಿದ್ಯಾರ್ಥಿ ಪ್ರಮುಖ್ ಸಿ.ಆದಿತ್ಯ, ಸಚಿನ್, ಗಣೇಶ್, ವಿಷ್ಣು, ಕಿರಣ್, ದರ್ಶನ್, ಪ್ರಜ್ವಲ್, ಅಭಿ, ದೇವರಾಜ್, ಅಪ್ಪು, ವಿನ್ಯಾಸ್, ಕೌಶಿಕ್, ಗೌತಮ್ ಮತ್ತಿತರರಿದ್ದರು.