ಸಾಮಾಜಿಕ ಸುಧಾರಣೆಗೆ ಆರ್ಥಿಕ ಸಮಾನತೆ ಮದ್ದು

24sgr2
ಸಾಗರದ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಜಿ.ಪರಮೇಶ್ವರಪ್ಪ ಉದ್ಘಾಟಿಸಿದರು. ಡಿ.ಮನೋಹರಪ್ಪ, ಕೆ.ಜಗನ್ನಾಥ್, ವಿ.ಟಿ.ಸ್ವಾಮಿ, ಡಾ. ಅನ್ನಪೂರ್ಣಾ ಇತರರಿದ್ದರು.
Published on

ಸಾಗರ: ಆರ್ಥಿಕ ಸಮಾನತೆಯಿಂದ ಮಾತ್ರ ಸಾಮಾಜಿಕ ಸುಧಾರಣೆ ಸಾಧ್ಯ. ಸಂಘಟನೆಗಳಲ್ಲಿ ವ್ಯವಸ್ಥಿತವಾಗಿ ತೊಡಗಿಕೊಳ್ಳುವ ಮನೋಪ್ರವೃತ್ತಿ ಬೆಳೆಯಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಹೇಳಿದರು.

ನಗರದ ಗುರುಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಸಂಘಟನೆ ಕಟ್ಟುವುದು ಸುಲಭ. ಆದರೆ ಅದನ್ನು ಸದೃಢವಾಗಿ ಮುನ್ನಡೆಸಿಕೊಂಡು ಹೋಗುವಾಗ ಅನೇಕ ಸವಾಲುಗಳು ಎದುರಾಗುತ್ತದೆ. ಹಣಕಾಸು ವಹಿವಾಟು ನಡೆಸುವ ಸಂಸ್ಥೆಯ ಚುಕ್ಕಾಣಿ ಹಿಡಿದವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದರು.
ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ ಮಾತನಾಡಿ, ಸಂಘಟನೆ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕು. ನಿರಂತರ ಪರಿಶ್ರಮದ ಮೂಲಕ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಪ್ರಶಸ್ತಿ ವಿಜೇತ ಶಿಕ್ಷಕರಾದ ಮನೋಹರಪ್ಪ, ಸೌಭಾಗ್ಯಾ, ಬಸವರಾಜಪ್ಪ, ಬಡ್ತಿ ಮುಖ್ಯಶಿಕ್ಷಕರ ಸಂಘದ ಇ.ಎನ್.ಪ್ರಭು , ರಮೇಶ್ ನಾಯ್ಕ, ಹೂವಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಡಿ.ಮನೋಹರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜಗನ್ನಾಥ್, ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಮುಖರಾದ ಮಾಲತೇಶ್, ಸೋಮಪ್ಪ, ವಿಕ್ಟೋರಿಯಾ ಫಟಾರ್ಡೋ, ಎಲ್.ಟಿ.ಗವಿಯಪ್ಪ, ಕೆ.ಬಿ.ಪಾರ್ವತಿ, ಎಂ.ವೈ.ಮೂರ್ತಿ, ಶಾರದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net