ಸಾಮಾಜಿಕ, ಧಾರ್ವಿುಕ ಕಾರ್ಯಗಳ ತಾಣವಾಗಲಿ ದೇವಸ್ಥಾನ

Published on

ಫೋಟೋ 20ಎಸ್ಡಿಪಿ4

ಸಿದ್ದಾಪುರ ತಾಲೂಕಿನ ಬೈಲಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಶಶಿಭೂಷಣ ಹೆಗಡೆ, ಗಂಗಾಧರ ನಾಯ್ಕ, ಉಪೇಂದ್ರ ಪೈ, ಅನಂತ ಮೂರ್ತಿ ಹೆಗಡೆ, ಕೆ.ಜಿ. ನಾಯ್ಕ, ಸತೀಶ ಹೆಗಡೆ, ಜಿ.ಎಸ್. ಹೆಗಡೆ, ನಾಗರಾಜ ನಾಯ್ಕ, ರವಿ ನಾಯ್ಕ, ಸುರೇಶ ಕಡಕೇರಿ ಇತರರಿದ್ದರು.

ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿಕೆ | ಅಷ್ಬಬಂಧ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಸನಾತನ ಧರ್ಮದ ಮೇಲೆ ಎಷ್ಟೆಲ್ಲ ಆಕ್ರಮಣಗಳಾಗಿವೆ. ಆದರೂ ಧರ್ಮ ಆಳಿಯದೆ ಗಟ್ಟಿಯಾಗಿದೆ. ದೇವಸ್ಥಾನಗಳು ಸಾಮಾಜಿಕ, ಧಾರ್ವಿುಕ ಕಾರ್ಯಗಳ ಕೇಂದ್ರಗಳಾಗಬೇಕು ಎಂದು ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.

ತಾಲೂಕಿನ ಬೈಲಳ್ಳಿಯಲ್ಲಿ ಮಹಾಕಾಲೇಶ್ವರ ದೇವಸ್ಥಾನದ ಅಷ್ಬಬಂಧ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉದ್ಯಮಿ ಉಪೇಂದ್ರ ಪೈ ಮಾತನಾಡಿ, ದೇಶದ ಭದ್ರ ಬುನಾದಿಗೆ ನಾವು ಒಂದಾಗಬೇಕು. ಪ್ರೀತಿಯ ನೀತಿಯನ್ನು ನಾವು ಜಗತ್ತಿಗೆ ಸಾರಬೇಕು. ಇಂದು ದುಷ್ಟಕೂಟಗಳು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿವೆ. ನಮ್ಮ ಜನಸಂಖ್ಯೆ ಕ್ಷೀಣಿಸಿದರೆ ನಮಗೆ ಉಳಿಗಾಲ ಇಲ್ಲ. ಸನಾತನ ಧರ್ಮದಲ್ಲಿ ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಇರಬೇಕು ಎಂದರು.

ಸಿದ್ದಾಪುರ ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜಿಬೈಲ್ ಮಾತನಾಡಿ, ದೇವಸ್ಥಾನದ ನಿರ್ವಣದಲ್ಲಿ ಒಂದಾದ ಹಾಗೇ ಧರ್ಮ ವಿಚಾರದಲ್ಲಿ ಒಂದಾಗಬೇಕು. ಸನಾತನ ಧರ್ಮ ಉಳಿಸುವ ಕಾರ್ಯ ನಮ್ಮಲ್ಲಿ ಆಗಬೇಕು ಎಂದರು.

ಸಾಮಾಜಿಕ ಧುರೀಣ ಅನಂತಮೂರ್ತಿ ಹೆಗಡೆ ಮಾತನಾಡಿ, ಜಾತೀಯತೆ ನಮ್ಮ ನಿಜವಾದ ಶತ್ರು. ರಾಜಕಾರಣಿಗಳು ನಮ್ಮಲ್ಲಿರುವ ವಿಕ್ನೇಸ್ ಅನ್ನು ಬಳಸಿಕೊಂಡು ಒಡೆದು ಆಳುತ್ತಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಬಾಳಬೇಕು ಎಂದರು.

ದೇವಸ್ಥಾನ ಕಟ್ಟಡ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಹಿರಿಯ ವಕೀಲ ಜಿ.ಎಸ್. ಹೆಗಡೆ ಬೆಳ್ಳೆಮಡ್ಕಿ, ಜಿಪಂ ಮಾಜಿ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಸತೀಶ ಹೆಗಡೆ ಬೈಲಳ್ಳಿ, ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸದಸ್ಯ ರವಿಕುಮಾರ ನಾಯ್ಕ, ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ, ಇತರರಿದ್ದರು.

ದೇವಸ್ಥಾನ ಕಮಿಟಿ ಕಾರ್ಯದರ್ಶಿ ಶ್ರೀಪಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಮಡಿವಾಳ ಹಾಗೂ ಕೆ.ಟಿ. ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net