

ಎನ್.ಆರ್.ಪುರ: ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನವಜೀವನ ಚಾರಿಟಬಲ್ ಸೇವಾ ಸಂಸ್ಥೆ ಆಶ್ರಯದಲ್ಲಿ ನಾಗರಿಕ ಹಕ್ಕು ರಕ್ಷಣಾ ಕಾಯ್ದೆ-1955, ಪ.ಜಾತಿ ಮತ್ತು ಪ.ಪಂಗಡಗಳ ದೌರ್ಜನ್ಯ, ಪ್ರತಿಬಂಧ ಹಾಗೂ ಇತರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಬಸ್ ನಿಲ್ದಾಣದಲ್ಲಿ ನಡೆಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಬಾನು ಉದ್ಘಾಟಿಸಿದರು. ಕಲಾವಿದರಾದ ಶೋಭಾ, ಮಂಟಿ ಲಿಂಗಯ್ಯ, ರಾಮಕೃಷ್ಣ, ವಸಂತಕುಮಾರಿ ಬೀದಿನಾಟಕದಲ್ಲಿ ಭಾಗವಹಿಸಿದ್ದರು. ನಂತರ ಮುತ್ತಿನಕೊಪ್ಪ, ಬಿ.ಎಚ್.ಕೈಮರ, ಗಡಿಗೇಶ್ವರದಲ್ಲೂ ಬೀದಿನಾಟಕ ನಡೆಯಿತು. ಪಪಂ ಉಪಾಧ್ಯಕ್ಷೆ ಉಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ನಿರಂಜನ್, ಅಧಿಕಾರಿ ಎ.ಕೆ.ಪಾಟೀಲ್, ಸಂಸ್ಥೆ ಕಾರ್ಯದರ್ಶಿ ದರ್ಶನ್, ಪಿಡಿಒ ಸಂತೋಷ್‌ಕುಮಾರ್ ಇತರರಿದ್ದರು.