ಸಾಮರ್ಥ್ಯ ತೋರಲು ಅವಕಾಶ ಅಗತ್ಯ

08HDK3
ಎಚ್.ಡಿ.ಕೋಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಶಾಸಕ ಎನ್.ಮಹೇಶ್ ಸನ್ಮಾನಿಸಿದರು. ಅನಿತಾ ನಿಂಗನಾಯಕ, ಉಮೇಶ್, ಪ್ರಕಾಶ್, ಸೋಮಶೇಖರ್ ಇದ್ದರು.
Published on


ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಭಿಮತ


ಎಚ್.ಡಿ. ಕೋಟೆ: ಅವಕಾಶ ಸಿಕ್ಕರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾನೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾರತೀಯ ವಿದ್ಯಾರ್ಥಿ ಸಂಘ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಈಗಿನ ಮಕ್ಕಳು ಶೇ.90ರಷ್ಟು ಅಂಕ ಪಡೆದು ತಲೆತಲಾಂತರದಿಂದ ಬಂದಿದ್ದ ಅಸಮಾನತೆಯನ್ನು ಹೋಗಲಾಡಿಸಿದ್ದಾರೆ. ಅವಕಾಶ ಸಿಕ್ಕಿದ್ದರಿಂದ ಅದನ್ನು ಬಳಸಿಕೊಂಡು ಮೇಲೆ ಬಂದಿದ್ದು, ಮುಂದಿನ 20 ವರ್ಷದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಲಿದೆ ಎಂದರು.


ಮುಂದಿನ ಜಗತ್ತು ಸ್ಪರ್ಧಾತ್ಮಕವಾಗಿದ್ದು, ವಿದ್ಯಾರ್ಥಿಗಳು ಪೈಪೋಟಿಯೊಂದಿಗೆ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡುವ ತಾಕತ್ತು ಇಲ್ಲದಿದ್ದರೆ ಜಯಿಸಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಯೋಚನೆ ಮಾಡಿ ಗೆಲ್ಲುತ್ತೇನೆ ಎಂಬ ಛಲವಿದ್ದರೆ ಸಾಕಷ್ಟು ಅವಕಾಶಗಳಿರುತ್ತದೆ. ಮದರ್ ತೆರೇಸಾ ಅಂತಹ ಸಾಧಕರ ಸಾಧನೆಗಳನ್ನು ಮಾದರಿಯನ್ನಾಗಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.


ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುರಸಭಾ ಅಧ್ಯಕ್ಷೆ ಅನಿತಾ ನಿಂಗನಾಯಕ, ಸದಸ್ಯರಾದ ನಂಜಪ್ಪ, ಐಡಿಯಾ ವೆಂಕಟೇಶ್, ಬೆಂಗಳೂರಿನ ಇನ್ಸೈಟ್ ಐಎಎಸ್ ಅಕಾಡೆಮಿ ಅಧ್ಯಕ್ಷ ಜಿ.ವಿ.ವಿನಯ್ ಕುಮಾರ್, ಉಮೇಶ್, ಎಚ್.ಎಸ್.ಗಣೇಶ್‌ಮೂರ್ತಿ, ಭೀಮನಹಳ್ಳಿ ಸೋಮೇಶ್, ಪ್ರಕಾಶ್, ಸಿಇಒ ಸತೀಶ್, ಕೃಷ್ಣಸ್ವಾಮಿ, ವಾಸುದೇವು, ವೆಂಕಟೇಶ್, ಸೋಮಶೇಖರ್, ಮೋಹನ್, ಮಹದೇವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net