ಸಾಧಕರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ಪ್ರದಾನ

18
Published on

ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಭಾನುವಾರ ನಗರದ ಪುರಭವನದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ, ನೇತ್ರ ಉಚಿತ ತಪಾಸಣೆ ಹಾಗೂ ಕನ್ನಡ ವಿತರಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಮೇಲುಕೋಟೆ ವೆಂಗಿಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಉದ್ಘಾಟಿಸಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಕೀಲ ಎಚ್.ಆರ್. ನಾರಾಯಣ್, ಅಲೆಯನ್ಸ್ ಜಿಲ್ಲಾ ರಾಜ್ಯಪಾಲ ಎಸ್. ವೆಂಕಟೇಶ್, ಉದ್ಯಮಿಗಳಾದ ಉಮೇಶ್ ಸಿ. ಭಜರಂಗಿ, ಪಿ. ಪ್ರಶಾಂತ್, ಬಂಡೀಪುರ ಎಸಿಎಫ್ ಎನ್.ಪಿ. ನವೀನ್ ಕುಮಾರ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಎಂ.ಸಿ.ಚೊಂದಮ್ಮ ಪೂನ್ನಚ್ಚ, ಹರೇ ಶ್ರೀನಿವಾಸ ಸಮಿತಿಯ ಗುಂಡು ವೆಂಕಟೇಶ್ ಕುಮಾರ್, ವಕೀಲ ಎಸ್. ಉಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಕಸ್ತೂರಿ ಚಂದ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮನಗರದ ಗೋವಿಂದಸ್ವಾಮಿ, ಜಿಲ್ಲಾಧ್ಯಕ್ಷೆ ಅಮೀನಾ ಬೇಗಂ, ಎಚ್.ಪಿ. ನಟರಾಜು, ನಗರಾಧ್ಯಕ್ಷೆ ಮೌಲ್ಯಾ ಜೈಕುಮಾರ್, ಹಾಸನ ಜಿಲ್ಲಾಧ್ಯಕ್ಷೆ ಪಾರ್ವತಿ, ಕೊಡಗು ಜಿಲ್ಲಾಧ್ಯಕ್ಷೆ ನಯನ ಹರಿಶ್ಚಂದ್ರ, ಸಂಸ್ಥಾಪಕ ಕಾರ್ಯದರ್ಶಿ ತೇಜಸ್ ಪೃಥ್ವಿರಾಜ್ ಇದ್ದರು. ಹುಬ್ಬಳ್ಳಿ- ಧಾರವಾಡ ಜಿಲ್ಲಾಧ್ಯಕ್ಷೆ ಜಿ. ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.

ಯದುಗಿರಿಯಮ್ಮ, ಹರ್ಷಿತಾ, ಅನಿ ಮಂಗಳೂರು, ಕನ್ಯಾಕುಮಾರಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು. ಉಚಿತವಾಗಿ ನೇತ್ರ ತಪಾಸಣಾ ಶಿಬಿರ ನಡೆಸಿ, ಅಗತ್ಯವಿರುವವರಿಗೆ ಕನ್ನಡಕವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net