ಸಾಗರದಲ್ಲಿ ತಂಪೆರೆದ ಮಳೆ

rain
ಸಾಗರದಲ್ಲಿ ಸುರಿದ ಬಾರಿ ಮಳೆಗೆ ಒಂದೇ ಛತ್ರಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪ್ರಯಾಸಪಟ್ಟು ಸಾಗುತ್ತಿರುವುದು.
Published on

ಸಾಗರ: ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಜನತೆಗೆ ಬುಧವಾರ ಮಧ್ಯಾಹ್ನ ಸುಮಾರು ಒಂದು ತಾಸು ಸುರಿದ ಬಾರಿ ಮಳೆ ಸಂತಸ ತಂದಿದೆ. ತಾಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ತೀವ್ರ ಬಿಸಿಲಿನ ವಾತಾವರಣವಿತ್ತು. ಮಳೆಗಾಲ ಬೇಸಿಗೆಯ ಕಾಲದ ರೀತಿ ಭಾಸವಾಗುತ್ತಿತ್ತು. ಬುಧವಾರ ಸುರಿದ ಮಳೆ ತಂಪೆರೆದಿದೆ. ರಸ್ತೆಗಳ ಮೇಲೆ ನೀರು ಹರಿದು ಜನ ಸಂಚಾರಕ್ಕೆ ತೊಂದರೆಯಾಯಿತು, ಮಳೆಯಿಂದ ತಪ್ಪಿಸಿಕೊಳ್ಳಲು ಶಾಲಾ, ಕಾಲೇಜು ವಿದ್ಯಾರ್ಥಿಗಳು ಅಂಗಡಿ ಮುಂಗಟ್ಟುಗಳ ಬಳಿ ನಿಂತಿದ್ದರು. ಮಳೆಯೆ ಇಲ್ಲದೇ ಕಂಗಾಲಾಗಿದ್ದ ರೈತರು ಹಾಗೂ ಜನತೆಗೆೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net