ಸಾಂಸ್ಕೃತಿಕ ಸ್ಪರ್ಧೆಯಿಂದ ಸ್ನೇಹ ವೃದ್ಧಿ

26 nrp 1 rotary
ಸಿಂಸೆಯಲ್ಲಿ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ-ನಾದ-ನರ್ತನ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈ.ಜಯಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಕಣಿವೆ ವಿನಯ್, ಎಚ್.ಎಸ್.ನಟೇಶ್, ಜಿ.ಆರ್.ದಿವಾಕರ, ಎಚ್.ಟಿ.ಧನಂಜಯ, ಮಧು, ಎಚ್.ವಿ.ಮಂಜುನಾಥ್ ಇದ್ದರು.
Published on

ಎನ್.ಆರ್.ಪುರ: ರೋಟರಿ ಕ್ಲಬ್ ಸದಸ್ಯರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಸ್ನೇಹ ವೃದ್ಧಿಯಾಗಲಿದೆ ಎಂದು ರೋಟರಿ ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈ.ಜಯಪ್ರಕಾಶ ಶೆಟ್ಟಿ ತಿಳಿಸಿದರು.

ಸಿಂಸೆಯಲ್ಲಿ ನಡೆದ ರೋಟರಿ ಜಿಲ್ಲೆ 3182ರ ವಲಯ 6ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ-ನಾದ-ನರ್ತನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಗೆದ್ದವರು ನ.10ರಂದು ಕುಂದಾಪುರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದರು.

ರೋಟರಿ ಕ್ಲಬ್ ಸದಸ್ಯ ಕಣಿವೆ ವಿನಯ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಬಂಧ ಗಟ್ಟಿಗೊಳಿಸುತ್ತವೆ. ಸಂಸ್ಕಾರ ಬೆಳೆಸುತ್ತವೆ ಎಂದರು.

ವಲಯ 6ರ ಸಹಾಯಕ ಗೌರ್ನರ್ ಎಚ್.ಎಸ್.ನಟೇಶ್ ಮಾತನಾಡಿ, ರೋಟರಿ ಸಂಸ್ಥೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೀಡೆಗಳು ನಡೆಯಲಿದ್ದು ಅದಕ್ಕೂ ರೋಟರಿ ಕ್ಲಬ್ ಸದಸ್ಯರು ಭಾಗವಹಿಸಬೇಕು ಎಂದು ತಿಳಿಸಿದರು.

ಎನ್.ಆರ್.ಪುರ ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ, ಎಚ್.ಟಿ.ಧನಂಜಯ, ಮಧು ವೆಂಕಟೇಶ್, ಕೆ.ಟಿ.ವೆಂಕಟೇಶ್, ಎಚ್.ವಿ.ಮಂಜುನಾಥ್, ರೇಖಾ ಉದಯಶಂಕರ್, ಎಲ್.ಡಿ.ನವೀನ್, ಎಚ್.ಡಿ.ವಿನಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net