ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿರುವ ಪಿಚ್ಚಳ್ಳಿ ಶ್ರೀನಿವಾಸ್‌ಗೆ ಜನಪ್ರೀತಿಯೇ ಪ್ರಶಸ್ತಿ /ಉಮಾಶ್ರೀ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಂಗಭೂಮಿಯ ಸಾಂಸ್ಕೃತಿಕ ಜಗತ್ತಿನಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ತನ್ನದೇ ಛಾಪನ್ನು ಮೂಡಿಸಿರುವ ಜನರ ಪ್ರೀತಿಯೆಂಬ ದೊಡ್ಡ ಪ್ರಶಸ್ತಿಗೆ ಭಾಜನವಾಗಿರುವ ಕಲಾವಿದ ಗಾಯಕರಾಗಿದ್ದಾರೆ ಎಂದು ಖ್ಯಾತ ಚಿತ್ರನಟಿ ಉಮಾಶ್ರೀ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾನ ಗಾರುಡಿಗ ಸಂಗೀತ ನಿರ್ದೇಶಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ ರವರಿಗೆ ಹೋರಾಟದ ಹಾಡುಗಾರರ ಬಳಗವು ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಾಂಸ್ಕೃತಿಕ ಕ್ಷೇತ್ರದ ಜನರ ಜೊತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬAತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್‌ರಿಗೆ ರಾಜ್ಯೋತ್ಸವ, ಅಕಾಡೆಮಿ ಹೀಗೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿ ಪ್ರಶಸ್ತಿಯೇ ದೊಡ್ಡದು ಎಂಬುದು ತಮ್ಮ ಭಾವನೆ ಎಂದರು.

ಜಾನಪದ ಅಭಿಲಾಷೆಯೊಂದಿಗೆ ನಟನಾಗಲು ಬಂದು ರಂಗಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿ ಹೆಸರು ಮಾಡಿರುವ ಪಿಚ್ಚಳ್ಳಿಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯ ಜೊತೆಗೆ ಉಳ್ಳವರ ಮುಂದೆ ಇಲ್ಲದವರು ಸೆಟೆದುನಿಂತು ಸಮನಾಗಿ ಬದುಕು ಸಾಗಿಸಬೇಕೆಂಬ ಹೋರಾಟ ಧ್ಯೇಯವನ್ನು ಹೊಂದಿರುವ ಕಲಾವಿದ ಎಂದು ಬಣ್ಣಿಸಿದರು.

ನೇರವಾದ ನುಡಿ, ಜನಪರ ಚಿಂತನೆ, ಹೋರಾಟ ಅವರನ್ನು ಎಲ್ಲರೂ ಪ್ರೀತಿಸುವಂತೆ ಮಾಡಿದೆ, ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವ ಸಂದರ್ಭದಲ್ಲಿ ನಾವೆಲ್ಲರೂ ಹರಸಲು ಬಂದಿಲ್ಲö, ಸಂಭ್ರಮಿಸಲು ಬಂದಿದ್ದೇವೆ ಎಂದು ವಿವರಿಸಿದರು.

ಕೇವಲ ಕನ್ನಡ ಮತ್ತು ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ ಮತ್ತು ಭಾಷೆಗಳ ಜನರ ನಡುವೆಯೂ ಪಿಚ್ಚಳ್ಳಿ ಶ್ರೀನಿವಾಸ್ ಜನಪ್ರಿಯತೆಯನ್ನು ಸಾರಿರುವುದು ಅವರ ಕಲಾ ಸಹೃದಯರಾಗಿದ್ದಾರೆಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್ ಹೋರಾಟದ ಹಾಡುಗಾರನಾಗಿ ಬಂದು ಸಮುದಾಯದ ಮೂಲಕ ಗಾಯಕರಾಗಿ ರೂಪುಗೊಂಡು, ರಂಗಾಯಣದ ನಂಟಿನಿAದ ರಂಗಕರ್ಮಿಯಾಗಿ ಸಾಗಿ ಬಂದಿದ್ದಾರೆ, ಮೈಕೆಲ್ ಜಾಕ್ಸನ್‌ರಂತೆ ವಿಶ್ವದ ಸಾಂಸ್ಕೃತಿಕ ಲೋಕದಲ್ಲಿ ಮೇರು ಶಿಖರವೇರವಾಗಿ ಪಿಚ್ಚಳ್ಳಿ ಶ್ರೀನಿವಾಸ್‌ರನ್ನು ತಾವು ಕಾಣಬೇಕಾಗಿದೆ, ಈ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ನಟ ಮಂಡ್ಯ ರಮೇಶ್ ಮಾತನಾಡಿ, ಕೋಲಾರ ಜಿಲ್ಲೆಯ ಕುಗ್ರಾಮ ಪಿಚ್ಚಳ್ಳಿಯಿಂದ ದಲಿತ ಹೋರಾಟದ ಹಿನ್ನೆಲೆಯಿಂದ ರಂಗಾಯಣಕ್ಕೆ ನೂರಾರು ಅಭ್ಯರ್ಥಿಗಳ ನಡುವೆ ಆಯ್ಕೆಗೊಂಡು ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿರುವ ಪಿಚ್ಚಳ್ಳಿ ಶ್ರೀನಿವಾಸ್ ತಮಗೆ ಆಪ್ತ ರಂಗಕರ್ಮಿ ಸ್ನೇಹಿತ ಎಂದು ವಿವರಿಸಿದರು.

ಜಿಲ್ಲಾ ಕಾಂಗ್ರೆಸ್ ಮತ್ತು ಸಾರಂಗರAಗ ಅಧ್ಯಕ್ಷ ಲಕ್ಷೀ÷್ಮನಾರಾಯಣ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್ ಕೋಲಾರ ಜಿಲ್ಲೆಯಿಂದ ಹೊರಹೊಮ್ಮಿ ಕಲೆ ಗಾಯನ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮಿಂಚುತ್ತಿರುವ ಆತ್ಮೀಯ ಗೆಳೆಯರಾಗಿದ್ದಾರೆಂದರು.

ಕರ್ನಾಟಕ ದಲಿತ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಡಾ.ಎಂ.ಚAದ್ರಶೇಖರ್ ಮಾತನಾಡಿ, ಪಿಚ್ಚಳ್ಳಿ ಹಾಗೂ ತಾವು ಹೇಗೆ ಬಾಲ್ಯದಿಂದಲೂ ಹೋರಾಟದ ಮೂಲಕ ಒಂದಾಗಿರುವ ಸಂಗತಿಗಳನ್ನು ನೆನಪಿಸಿಕೊಂಡರು.

ನಾಟಕರಾದ ಕುಪ್ಪಣ್ಣ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್‌ರಿಗೆ ಕೇವಲ ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದಲ್ಲ ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿ ಗೌರವ ಸಿಗಬೇಕಿದೆ ಎಂದು ಆಶಿಸಿದರು.

ಕಾರ್ಯಕ್ರಮದ ಭಾಗವಾಗಿ ಬಹುಮುಖ ಪ್ರತಿಭೆಯ ಪಿಚ್ಚಳ್ಳಿö, ದೇಸಿ ಗಾಯನ ಸತ್ವದ ವಿವಿಧ ಆಯಾಮಗಳು ಮತ್ತು ಪಿಚ್ಚಳ್ಳಿö, ದಲಿತ ದಲಾ ಮಂಡಳಿ ಹೋರಾಟದ ಹಾಡುಗಳು ಹಾಗೂ ಪಿಚ್ಚಳ್ಳಿö, ರಂಗಭೂಮಿ ಸಂಘಟಕ ಹಾಗೂ ನಟ ನಿರ್ದೇಶಕ ಪಿಚ್ಚಳ್ಳಿ ವಿಷಯಗಳ ಕುರಿತು ಕಾರ್ಯಾಗಾರ ಜರುಗಿತು. ಅಭಿನಂದನಾರ್ಹ ಪಿಚ್ಚಳ್ಳಿ ಶ್ರೀನಿವಾಸ್‌ರೊಂದಿಗೆ ಸಂವಾದ ಕಾರ್ಯಕ್ರಮವು ಜರುಗಿತು.

ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಇತರರು ಜಾನಪದ ಗಾನ ಗಾರುಡಿಗ ಪಿಚ್ಚಳ್ಳಿ ಶ್ರೀನಿವಾಸ್‌ರನ್ನು ಅಭಿನಂದಿಸಿದರು.

ವಿವಿಧ ಗಾಯಕರಿಂದ ಕ್ರಾಂತಿಗೀತೆಗಳ ಗಾಯನ ನೆರವೇರಿತು.

ಪಿಚ್ಚಳ್ಳಿ ಶ್ರೀನಿವಾಸ್ ಸಂಗ್ರಹಿಸಿರುವ ಹೋರಾಟದ ಹಾಡುಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಂದುದರ ಹೋನ್ನಾಪುರ, ಎನ್. ಮುನಿಸ್ವಾಮಿ ಸಿ.ಎಂ. ಮುನಿಯಪ್ಪ ಮುಂತಾದವರಿದ್ದರು.

ಚಿತ್ರ ಕೆ.ಎಲ್.ಆರ್. ೨೩ ಕೋಲಾರ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಭಾನುವಾರ ರಾಜ್ಯೋತ್ಯವ ಪ್ರಶಸ್ತಿ ಪುರಸ್ಕೃತ ಪಿಚ್ಚಳ್ಳಿ ಶ್ರೀನಿವಾಸ್‌ರ ಅಭಿನಂದನಾ ಸಮಾರಂಭದಲ್ಲಿ ಅವರು ಸಂಗ್ರಹಿಸಿರುವು ಹೋರಾಟದ ಹಾಡುಗಳು ಪುಸ್ತಕವನ್ನು ಖ್ಯಾತ ನಟಿ ಉಮಾಶ್ರೀö, ಮಂಡ್ಯ ರಮೇಶ್, ಕೋಟಿಗಾನಹಳ್ಳಿ ರಾಮಯ್ಯ ಇತರರು ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net