ಸಾಂಕ್ರಾಮಿಕ ರೋಗಗಳ ಭೀತಿ

26kdr1 larva
ಕಡೂರು ಪಟ್ಟಣದ ಬಡಾವಣೆಯೊಂದರಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಲಾರ್ವಾ ಸಮೀಕ್ಷೆ ನಡೆಸುತ್ತಿರುವುದು.
Published on

ಕಡೂರು: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ವರ್ಷದ ಜನವರಿಯಿಂದ ಮೇ ವರೆಗೆ ಜಿಲ್ಲಾದ್ಯಂತ ಒಟ್ಟು 10ಡೆಂೆ ಪ್ರಕರಣಗಳು ದೃಢಪಟ್ಟಿದ್ದು ಒಂದು ಚಿಕುನ್‌ಗುನ್ಯಾ ಪತ್ತೆಯಾಗಿದೆ. ತರೀಕೆರೆ 3, ಕೊಪ್ಪ-ಮೂಡಿಗೆರೆ ತಲಾ 2, ಕಡೂರು, ಶೃಂಗೇರಿ, ಚಿಕ್ಕಮಗಳೂರಿನಲ್ಲಿ ತಲಾ ಒಂದೊಂದು ಡೆಂೆ ಪ್ರಕರಣಗಳು ಪತ್ತೆಯಾಗಿದ್ದು, ಈಗ ಎಲ್ಲರೂ ಗುಣಮುಖರಾಗಿದ್ದಾರೆ.

ಮಳೆ ನೀರು ನಿಲ್ಲುವ ಕಡೆ ಸೊಳ್ಳೆಗಳ ಸಂತತಿ ವೃದ್ಧಿಸುತ್ತಿರುವ ಜತೆಗೆ ಡೆಂೆೆ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಈ ನಡುವೆ ಲಾರ್ವಾ ಉತ್ಪತ್ತಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೂ ನಿರಂತರ ಜಾಗೃತಿ ಮೂಡಿಸುತ್ತಿದೆ. ಲಾರ್ವಾ ಸರ್ವೇ ನಿರಂತರವಾಗಿ ನಡೆಯುತ್ತಿದೆ.

ಈ ಬಾರಿಯೂ ಪ್ರತಿ ತಿಂಗಳು ಒಂದು ದಿನ ನಿಗದಿಪಡಿಸಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ತಂಡದೊಂದಿಗೆ ಗ್ರಾಮಗಳಲ್ಲಿನ ಪ್ರತಿ ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಿ, ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಗ್ರಾಮೀಣಕ್ಕಿಂತ ನಗರ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೆಂಬಲ ದೊರಕದಿರುವುದು ಮಾತ್ರ ವಿಪರ್ಯಾಸ.

ಈಗಾಗಲೇ ಬಯಲುಸೀಮೆ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲಿನ ತಾಪ ಹೆಚ್ಚಾದಂತೆ ನೀರು ಸಂಗ್ರಹವಾದರೆ ರೋಗವಾಹಕ ಸೊಳ್ಳೆಗಳ ಉತ್ಪತ್ತಿಗೆ ಸಹಕಾರಿಯಾಗುತ್ತದೆೆ. ಆರೋಗ್ಯ ಇಲಾಖೆ ತಜ್ಞರ ಪ್ರಕಾರ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net