

ಮೀನುಗಾರಿಕೆ ಇಲಾಖೆಯ ವತಿಯಿಂದ 2025-26ನೇ ಸಾಲಿನ ವಿಶೇಷ ಆರ್ಥಿಕ ನೆರವು ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ಪರಿಶಿಷ್ಟ ಜಾತಿ (SC ) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದ ಆಯ್ಕೆ ಮೀನು ಮಾರಾಟಗಾರರಿಗೆ ಮೀನು ಸಾಗಾಣಿಕೆ ಮತ್ತು ಮಾರಾಟಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಯೋಜನೆಯ ಮುಖ್ಯಾಂಶಗಳು: ಉದ್ದೇಶ: ಮೀನು ಸಾಗಾಣಿಕೆ ಮತ್ತು ಮಾರಾಟಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಆರ್ಥಿಕ ನೆರವು ನೀಡುವುದು, ಆ ಮೂಲಕ ನಿಮ್ಮ ವ್ಯಾಪಾರವನ್ನು ಬೆಳೆಸಲು ಸಹಾಯ ಮಾಡುವುದು, ಆರ್ಥಿಕ ನೆರವು: ಫಲಾನುಭವಿಗಳಿಗೆ ಘಟಕ ವೆಚ್ಚವಾದ ರೂ. 6.00 ಲಕ್ಷಕ್ಕೆ ಶೇ. 50 ರಷ್ಟು, ಅಂದರೆ ಗರಿಷ್ಠ ರೂ. 3.00 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುವುದು, ಫಲಾನುಭವಿ ವಂತಿಗೆ: ಉಳಿದ ಶೇ. 50% ರಷ್ಟು (ರೂ. 3.00 ಲಕ್ಷ) ಹಣವನ್ನು ಫಲಾನುಭವಿಯೇ ಭರಿಸಬೇಕು ಅಥವಾ ಬ್ಯಾಂಕ್ ಸಾಲದ ಮೂಲಕ ವ್ಯವಸ್ಥೆ ಮಾಡಿಕೊಳ್ಳಬೇಕು.
ಮೈಸೂರು ಜಿಲ್ಲೆಗೆ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ (SC ಅ)ಗೆ 2 ಫಲಾನುಭವಿಗಳು, ಪರಿಶಿಷ್ಟ ಪಂಗಡ (ST)ಗೆ 1 ಫಲಾನುಭವಿಯನ್ನು ನಿಗಧಿಪಡಿಸಿರುವ ಗುರಿ ಹೊಂದಿದೆ.
ಆಸಕ್ತ ಮತ್ತು ಅರ್ಹ ಮೀನು ಮಾರಾಟಗಾರರು ಸ್ಥಳೀಯ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು. ದಾಖಲೆಗಳ ಸಲ್ಲಿಕೆ ನಿಮ್ಮ ಅರ್ಜಿಯೊಂದಿಗೆ, ಗುರುತಿನ ದಾಖಲೆ, ವಿವರವಾದ ಯೋಜನಾ ವರದಿ, ವಾಹನ ಮತ್ತು ಅಗತ್ಯ ಉಪಕರಣಗಳ ದರಪಟ್ಟಿ/ಇನ್‌ವಾಯ್ಸ್ ದಾಖಲೆಗಳನ್ನು ಸಂಬoಧಪಟ್ಟ ತಾಲ್ಲೂಕು ಮೀನುಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.