ಸಹಕಾರ ಸಂಸ್ಥೆ ಅಭಿವೃದ್ಧಿಗೆ ಗ್ರಾಹಕರೇ ಕಾರಣ

04bhr 3 sabhe
ಬಾಳೆಹೊನ್ನೂರು ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಷೇರುದಾರರು ಭಾಗವಹಿಸಿದ್ದರು.
Published on

ಬಾಳೆಹೊನ್ನೂರು: ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಗ್ರಾಹಕರೇ ಮೂಲ ಕಾರಣ ಎಂದು ಬಾಳೆಹೊನ್ನೂರು ವಿವಿಧೋದ್ದೇಶ ಸೌಹಾರ್ದದ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಹೇಳಿದರು.

ರೋಟರಿ ಭವನದಲ್ಲಿ ಬಾಳೆಹೊನ್ನೂರು ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಬಾಳೆಹೊನ್ನೂರು ವಿವಿಧೋದ್ದೇಶವು ಗ್ರಾಹಕರಿಗೆ ಅಗತ್ಯವುಳ್ಳ ವಿವಿಧ ಸೇವೆ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಉತ್ತಮ ಕಾರ್ಯಚಟುವಟಿಕೆಯೊಂದಿಗೆ ಸಂಸ್ಥೆ ಲಾಭದಲ್ಲಿಯೂ ಮುನ್ನಡೆಯುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಕೆ.ಕೆ.ವೆಂಕಟೇಶ್, ನಿರ್ದೇಶಕರಾದ ಎಂ.ವಿ.ತಿಮ್ಮಯ್ಯ, ಎ.ಆರ್.ಸುರೇಂದ್ರ, ಕೆ.ಎ.ವಿವೇಕ್, ಎಂ.ಎಲ್.ಮಂಜೇಶ್‌ಗೌಡ, ಬಿ.ಎಸ್.ಶ್ರೀನಿವಾಸ ಗೌಡ, ಸತೀಶ್, ಇರ್ಷಾದ್ ಅಹ್ಮದ್ ಖಾನ್, ಎಂ.ಎಲ್.ಸುಮಿತ್ರಾ, ಬಿ.ಬಿ.ಉಮಾ, ಸಿಇಒ ಸೂರ್ಯನಾರಾಯಣ, ಸಿಬ್ಬಂದಿ ಪಿ.ಡಿ.ದಿವಿನ್, ರೇಖಾ, ಪಲ್ಲವಿ, ಎ.ಸನತ್ ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net