

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ದಟ್ಟಗಳ್ಳಿಯ ಚಾಮುಂಡೇಶ್ವರಿ ನಗರ ಸರ್ವೋದಯ ಸಹಕಾರ ಸಂಘಕ್ಕೆ ನಿವೇಶನಗಳ ಹಂಚಿಕೆ ಸಂಬಂಧ ಸಾಮಾನ್ಯ ಸಭೆಯು ಕೈಗೊಂಡಿದ್ದ ನಿರ್ಣಯವನ್ನು ನಗರಾಭಿವೃದ್ಧಿ ಇಲಾಖೆಯು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇಲಾಖೆಯು ನ. 30ರಂದು ಆದೇಶ ಹೊರಡಿಸಿದ್ದು, ಇದರಿಂದ ಮುಡಾದಿಂದ ಸಂಘಕ್ಕೆ ಮಂಜೂರಾಗಿರುವ ಸುಮಾರು 48 ನಿವೇಶನಗಳ ಫಲಾನುಭವಿಗಳಿಗೆ ಆತಂಕ ಎದುರಾಗಿದೆ.