

ಕೋಲಾರ: ನಗರದ ಹದಯಭಾಗದ ಸರ್ವಜ್ಞ ಪಾರ್ಕಿನಲ್ಲಿ ಬುಧವಾರ ರಾತ್ರಿ ಕಳ್ಳರು ಬೆಲೆ ಬಾಳುವ ಎರಡು ಶ್ರೀಗಂಧ ಮರಗಳನ್ನು ಕಳವು ಮಾಡಿದ್ದಾರೆ. ಗುರುವಾರ ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ನಾಗರಿಕರು ಗಮನಿಸಿ ಪೌರಾಯುಕ್ತರ ಗಮನಕ್ಕೆ ತಂದಿದ್ದಾರೆ. ಇದರ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೌರಾಯುಕ್ತ ಸಿ.ಪ್ರಸಾದ್ ಅವರು ಠಾಣಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
ಸರ್ವಜ್ಞ ಪಾರ್ಕಿನಲ್ಲಿ ಹತ್ತಾರು ಶ್ರೀಗಂಧ ಮರ ಬೆಳೆಸಲಾಗಿತ್ತು, ಭದ್ರತೆ ಇಲ್ಲದೆ ಈ ಹಿಂದೆ ನಾಲ್ಕೈದು ಶ್ರೀಗಂಧ ಮರಗಳ ಕಳವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಭದ್ರತಾ ವ್ಯವಸ್ಥೆ ವಾಡಿ ಉಳಿದಿರುವ ಮರಗಳನ್ನು ಉಳಿಸಿಕೊಳ್ಳಬೇಕು. ಕೆ.ಎಸ್.ಗಣೇಶ್, ವಾಯು ವಿಹಾರಿ, ಗಲ್‌ಪೇಟೆ ನಿವಾಸಿ, ಕೋಲಾರ