ಸರ್ಕಾರಿ ಶಾಲೆಗಳಿಂದ ಗುಣಮಟ್ಟದ ಶಿಕ್ಷಣ

9 pnh school
ಪಂಚನಹಳ್ಳಿ ಸರ್ಕಾರಿ ಪ್ರೌಢಶಾಲಾ ವಾರ್ಷಿಕೋತ್ಸವನ್ನು ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್ ಉದ್ಘಾಟಿಸಿದರು. ಪಿ.ಎಸ್. ರವಿಕುಮಾರ್, ರೂಪಾ ಶ್ರೀನಿವಾಸ್, ಸಾವೆ ಮರಳಪ್ಪ, ಪಿ.ಸಿ.ಪ್ರಸನ್ನ, ಮರಳಪ್ಪ, ಪಾಪಣ್ಣ, ಸಂತೋಷ್, ರೇಖಾ, ಲತಾಮಣಿ ಇದ್ದರು.
Published on

ಪಂಚನಹಳ್ಳಿ: ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಪಂಚನಹಳ್ಳಿ ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್ ತಿಳಿಸಿದರು.

ಪಂಚನಹಳ್ಳಿ ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಗೆ ವಾರ್ಷಿಕೋತ್ಸವ ಸೂಕ್ತ ವೇದಿಕೆಯಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಕಲೆ ಅನಾವರಣಗೊಳ್ಳುತ್ತದೆ ಎಂದು ತಿಳಿಸಿದರು.

ಪಿ.ಆರ್.ಮರುಳಪ್ಪ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಈ ಶಾಲೆಯಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ ಮಾತನಾಡಿ, ಗ್ರಾಮೀಣ ಪ್ರದೇಶದ ಅಂಚಿನಲ್ಲಿರುವ ಪಂಚನಹಳ್ಳಿಯಲ್ಲಿ ಪ್ರಾಥಮಿಕ ಹಂತದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಇದಕ್ಕೆ ಗ್ರಾಮದ ಹಿರಿಯರ ಕೊಡುಗೆ ಅಪಾರ ಎಂದು ತಿಳಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ರವಿಕುಮಾರ್ ಮಾತನಾಡಿ, ಪಂಚನಹಳ್ಳಿ ಗ್ರಾಮ ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿ. ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಗ್ರಾಪಂ, ಎಸ್‌ಡಿಎಂಸಿ, ಶಿಕ್ಷಕರು, ಪಾಲಕರ ಪಾತ್ರ ಹಿರಿದು ಎಂದು ಹೇಳಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಪ್ರೇಮ್‌ಕುಮಾರ್, ಗ್ರಾಪಂ ಉಪಾಧ್ಯಕ್ಷೆ ರೂಪಾ ಶ್ರೀನಿವಾಸ್, ಸದಸ್ಯರಾದ ಸಾವೆ ಮರುಳಪ್ಪ, ಪಂಚನಹಳ್ಳಿ ಪಾಪಣ್ಣ, ಶೀಲಾ ರವಿಕುಮಾರ್, ರೇಖಾ, ಲತಾಮಣಿ, ಶಾರದಮ್ಮ, ಮುಖ್ಯಶಿಕ್ಷಕರಾದ ವಿರೂಪಾಕ್ಷ, ಸೋಮಶೇಖರ್, ಚಂದ್ರಶೇಖರ್, ವಿನಾಯಕ್, ನಿವೃತ್ತ ಉಪ ತಹಸೀಲ್ದಾರ್ ರಂಗಶೆಟ್ಟಿ, ಶಂಕರಪ್ಪ, ಸಂಜಯ್, ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net