ಸರ್ಕಾರಿ ಶಾಲೆ ಪ್ರಗತಿಗೆ ಶ್ರಮಿಸಿ

16kls2 school
ಕಳಸ ಕಳಶೇಶ್ವರ ನಗರ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಕಳಸ ಗ್ರಾಪಂ ಸದಸ್ಯ ಭಾಸ್ಕರ ಗೌಡ ಅವರನ್ನು ಗೌರವಿಸಲಾಯಿತು. ಅನ್ನಪೂರ್ಣಾ, ರೇವತಿ, ಬಿ.ಎಂ.ಸುರೇಂದ್ರ, ವಿನಾಯಕ, ಶರ್ೀ ಇತರರಿದ್ದರು.
Published on

ಕಳಸ: ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ ಮನೋಭಾವ ಬೇಡ. ಮಕ್ಕಳನ್ನು ಗ್ರಾಮದ ಸರ್ಕಾರಿ ಶಾಲೆಗೆ ಸೇರಿಸಿ ಶಾಲೆಯ ಪ್ರಗತಿಗೆ ಗ್ರಾಮಸ್ಥರು ಶ್ರಮಿಸಬೇಕು ಎಂದು ಕನ್ನಡ ಜಾನಪದ

ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಹೇಳಿದರು.

ಕಳಶೇಶ್ವರ ನಗರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಾದಂತೆ

ಹೆಚ್ಚಿನ ಶಿಕ್ಷಕರು ಮತ್ತು ಸೌಲಭ್ಯಗಳು ಕಲ್ಪಿಸಬಹುದು. ಇದರಿಂದ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ಗ್ರಾಪಂ ಸದಸ್ಯ ಭಾಸ್ಕರ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಪ್ರಭು ಅವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ

ವಿತರಿಸಲಾಯಿತು. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಗೌರವಿಸಲಾಯಿತು.

ಗ್ರಾಪಂ ಸದಸ್ಯ ಭಾಸ್ಕರ ಗೌಡ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನ್ನಪೂರ್ಣಾ, ಮುಖ್ಯಶಿಕ್ಷಕಿ ರೇವತಿ,

ಮುಖಂಡರಾದ ಬಿ.ಎಂ.ಸುರೇಂದ್ರ, ವಿನಾಯಕ, ಶರ್ೀ, ಮಹೇಶ್, ಮಧು, ರಾಮಣ್ಣ ಹಾಗೂ ಸಹ ಶಿಕ್ಷಕರು, ಪಾಲಕರು, ಗ್ರಾಮಸ್ಥರು, ಮಕ್ಕಳು ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ

ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net