

ಶೃಂಗೇರಿ: ಸರ್ಕಾರಿ ಶಾಲೆಗಳ ಉನ್ನತಿಗೆ ಸಂಸ್ಥೆಗಳು ಕೈಜೋಡಿಸಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ ತಿಳಿಸಿದರು.
ರೋಟರಿ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆಯಿಂದ ವೈಕುಂಠಪುರ, ತೆಕ್ಕೂರು, ಕೂತಗೋಡು ಹಾಗೂ ಅಂಗನವಾಡಿಯ ಸುಮಾರು 75 ಸರ್ಕಾರಿ ಶಾಲಾ ಮಕ್ಕಳಿಗೆ ಛತ್ರಿ, ಬ್ಯಾಗ್ ಹಾಗೂ ನೋಟ್‌ಬುಕ್‌ಗಳನ್ನು ಸೋಮವಾರ ವಿತರಿಸಿ ಮಾತನಾಡಿದರು.
ರೋಟರಿ ಸಂಸ್ಥೆ ಶೈಕ್ಷಣಿಕ, ಆರ್ಥಿಕ, ಪರಿಸರ ಕಾಳಜಿಯೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ನೀಡುತ್ತಿದೆ. ನಿಸ್ವಾರ್ಥ ಸೇವೆ ಮೂಲಕ ಸಮಾಜದ ಕಟ್ಟಕಡೆಯ ಜನರಿಗೆ ಸೌಲಭ್ಯ ಕಲ್ಪಿಸುತ್ತಿದೆ ಎಂದರು.
ಇನ್ನರ್‌ವ್ಹೀಲ್ ಅಧ್ಯಕ್ಷೆ ಮಂಜುಳಾ ಮಾತನಾಡಿ, ಸಂಸ್ಥೆ ನಿರಂತರ ಸಮಾಜಮುಖಿಯಾಗಿ ದುಡಿಯುತ್ತಿದೆ ಎಂದರು. ರೋಟರಿ ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗಡೆ, ಮಾಜಿ ಅಧ್ಯಕ್ಷ ವೆಂಕಟೇಶ್, ಜಗದೀಶ್ ಹೆಗಡೆ, ಇನ್ನರ್‌ವ್ಹೀಲ್ ಕಾರ್ಯದರ್ಶಿ ರತ್ನಾ ನಾಗೇಶ್, ಪದಾಧಿಕಾರಿಗಳಾದ ಡಾ. ಭುವನೇಶ್ವರಿ ಬಲ್ಲಾಳ್, ಸುಜಾತಾ, ಸುಮಾ, ಸೌಮ್ಯಾ ಇದ್ದರು.