ಸರ್ಕಾರಿ ಕಚೇರಿ ಪರಿಶೀಲನೆಗೆ ಲೋಕಾ ಮಾರ್ಗಸೂಚಿ; ದಾಳಿ ನಂತರ ಪೂರ್ಣ ಮಾಹಿತಿ ಸಲ್ಲಿಸಲು ಸೂಚನೆ

Raid-
Published on

ಬೆಂಗಳೂರು: ಲೋಕಾಯುಕ್ತ ಪೊಲೀಸರು ಸರ್ಕಾರಿ ಕಚೇರಿಗಳಿಗೆ ದಿಢೀರ್​ ಭೇಟಿ ನೀಡಿ ಪರಿಶೀಲಿಸುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​, ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಅದರಂತೆ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ದಾಳಿ ನಂತರ ಪೊಲೀಸರು ಸಲ್ಲಿಸುತ್ತಿರುವ ಬಹುತೇಕ ವರದಿಗಳು ಅಪೂರ್ಣ ಮಾಹಿತಿಯಿಂದ ಕೂಡಿದೆ. ಹೀಗಾಗಿ ಇನ್ನು ಮುಂದೆ ತಪಾಸಣೆ ನಡೆಸುವ ಪ್ರತಿ ಕಚೇರಿ ಹಾಗೂ ಸ್ಥಳಗಳ ಕುರಿತು ಕಂಡು ಬಂದ ಅಂಶಗಳು, ನ್ಯೂನ್ಯತೆಗಳು, ನ್ಯೂನ್ಯತೆಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳು, ನ್ಯೂನ್ಯತೆಗಳಿಗೆ ಕಾರಣರಾದ ಅಧಿಕಾರಿ/ಸಿಬ್ಬಂದಿಗಳ ವಿವರ, ಶಿಫಾರಸ್ಸು/ಪರಿಹಾರ ಕ್ರಮಗಳನ್ನು ಸವಿವರವಾಗಿ ಉಲ್ಲೇಖಿಸಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಭೇಟಿ

  • ಹಾಜರಿದ್ದ ವಿದ್ಯಾರ್ಥಿಗಳ ವಿವರ, ಮಕ್ಕಳೊಂದಿಗೆ ಸಂವಾದ
  • ಸ್ವಚ್ಛತೆ ನಿರ್ವಹಣೆ, ಆಹಾರ ಗುಣಮಟ್ಟ
  • ಯಾವುದಾದರು ಶುಲ್ಕ ಸಂಗ್ರಹಿಸುತ್ತಿರುವ ಬಗ್ಗೆ
  • ಕಂಡು ಬಂದ ನ್ಯೂನತೆಗಳು
  • ನ್ಯೂನತೆಗಳಿಗೆ ಹೊಣೆಗಾರರಾದ ಅಧಿಕಾರಿ/ಸಿಬ್ಬಂದಿ ವಿವರ

ಆಸ್ಪತ್ರೆ ಭೇಟಿ

  • ಆಸ್ಪತ್ರೆ ಸಿಬ್ಬಂದಿಗಳ ವಿವರ
  • ಕರ್ತವ್ಯ ಹಂಚಿಕೆ ವಿವಿರ ಹಾಗೂ ಪರಿಶೀಲನೆ
  • ಸ್ವಚ್ಛತೆ ಹಾಗೂ ನೈರ್ಮಲ್ಯ
  • ಸಾರ್ವಜನಿಕರಿಗೆ ಒದಗಿಸಿರುವ ಸೌಲಭ್ಯಗಳ ವಿವರ
  • ರೋಗಿಗಳೊಂದಿಗೆ ಸಮಾಲೋಚನೆ
  • ಮೆಡಿಕಲ್​ ತ್ಯಾಜ್ಯಗಳ ವಿಲೇವಾರಿ ವಿವರ
  • ಕಂಡು ಬಂದ ನ್ಯೂನತೆಗಳು
  • ಸಂಗ್ರಹಿಸಿರುವ ದಾಖಲೆಗಳು
  • ನ್ಯೂನತೆಗಳಿಗೆ ಹೊಣೆಗಾರರಾದ ಅಧಿಕಾರಿ/ಸಿಬ್ಬಂದಿ ವಿವರ

ಅಂಗನವಾಡಿ, ವಸತಿ ನಿಲಯ ಭೇಟಿ

  • ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವಿವರ
  • ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ
  • ವಿದ್ಯಾರ್ಥಿಗಳೊಂದಿಗೆ ಸಂವಾದ
  • ಯಾವುದಾದರು ಶುಲ್ಕ ಸಂಗ್ರಹಿಸುತ್ತಿರುವ ಬಗ್ಗೆ ವಿವರ
  • ಸುರಕ್ಷತಾ ಕ್ರಮಗಳ ಪರಿಶೀಲನೆ
  • ಕಂಡು ಬಂದ ನ್ಯೂನತೆಗಳು
  • ನ್ಯೂನತೆಗಳಿಗೆ ಹೊಣೆಗಾರರಾದ ಅಧಿಕಾರಿ/ಸಿಬ್ಬಂದಿ ವಿವರ

ಸರ್ಕಾರಿ ಕಚೇರಿ ಭೇಟಿ

  • ಪರಿವೀಕ್ಷಣೆ ನಡೆಸಿದ ಅಧಿಕಾರಿ ವಿವರ
  • ಹಾಜರಾತಿ ಪುಸ್ತಕ
  • ನಗದು ಘೋಷಣಾ ಪುಸ್ತಕ
  • ಮೇಲಾಧಿಕಾರಿಗಳ ಭೇಟಿ ವಿವರ
  • ಸಾರ್ವಜನಿಕ ಅಹವಾಲುಗಳು
  • ಶೋಧನಾ ಸಮಯದಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು
  • ನ್ಯೂನತೆಗಳಿಗೆ ಹೊಣೆಗಾರರಾದ ಅಧಿಕಾರಿ/ಸಿಬ್ಬಂದಿ ವಿವರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net