

ತಿ.ನರಸೀಪುರ: ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಹುಟ್ಟುಹಬ್ಬದ ಅಂಗವಾಗಿ ಡಾ.ಮೋಹನ್ ಸ್ನೇಹ ಬಳಗ ಹಾಗೂ ಪ್ರಲಕ್ಷ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಭಾನುವಾರ ಹಣ್ಣು-ಬ್ರೆಡ್ ವಿತರಿಸಲಾಯಿತು.
ಕಳೆದ ಮೂರು ತಿಂಗಳ ಹಿಂದೆ ಎನ್.ಎಸ್.ಮೋಹನ್ ಸ್ನೇಹಬಳಗ ಹಾಗೂ ಪ್ರಲಕ್ಷ ಚಾರಿಟಬಲ್ ಟ್ರಸ್‌ಟ್ಥ್ಾಪಿಸಿ ಜನಸೇವೆ ಮಾಡುತ್ತಾ ಬರಲಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶವಿದೆ. ಜಿಲ್ಲೆಯಾದ್ಯಂತ ಜನಸೇವೆ ಮಾಡಲು ಸಂಸ್ಥೆ ಸ್ಥಾಪಿಸಿದ್ದೇವೆ ಎಂದು ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ.ಮೋಹನ್ ತಿಳಿಸಿದರು.
ಬಿಜೆಪಿ ಮುಖಂಡ ಡಾ.ರೇವಣ್ಣ, ಕೀಲು ಮತ್ತು ಮೂಳೆ ತಜ್ಞ ಡಾ.ದಯಾನಂದ ಬಾಬು, ಪವನ್, ಕೊತ್ತೇಗಾಲ ಸಿದ್ದಮಲ್ಲಪ್ಪ (ಕಿಟ್ಟಿ), ಚೌಹಳ್ಳಿ ಸಿದ್ದರಾಜು, ಮೂಗೂರು ಜಯಣ್ಣ, ಕರೋಹಟ್ಟಿ ಮಹದೇವಯ್ಯ, ಮರಡೀಪುರ ನಾಗರಾಜು, ನಿಲಸೋಗೆ ಬಸವರಾಜು, ಮೂಗೂರು ಸಿದ್ದರಾಜು ಮತ್ತಿತರರಿದ್ದರು.