ಸರ್ಕಾರದ ಬಿಟ್ಟಿ ಭಾಗ್ಯಗಳಿಂದ ಆಟೋ ಮತ್ತು ಟಾಕ್ಸಿ ಚಾಲಕರು ಬೀದಿಗೆ ಬೀಳುವಂತಾಗಿದೆ / ಸಾರಿಗೆ ಸಚಿವರ ಜಾರಿಕೆ ಉತ್ತರಕ್ಕೆ ಖಂಡನೆ / ಕೆ.ವಿ.ಸುರೇಶ್ ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಂಗ್ರೇಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಂದಾಗಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೀದಿಗೆ ಬೀಳುವಂತಾಗಿದ್ದಾರೆ. ರಾಜ್ಯ ಸರ್ಕಾರದ ಅವೈಜ್ಞಾನಿಕ ಮತ್ತು ವಿವೇಕರಹಿತವಾದ ತೀರ್ಮಾನಗಳಿಂದಾಗಿ ವಾಣಿಜ್ಯ ವಾಹನಗಳ ಸಾರಿಗೆ ಉದ್ಯಮಕ್ಕೆ ತುಂಭಲಾರದಷ್ಟು ನಷ್ಟ ಉಂಟಾಗಿದೆ ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಚಾಲಾಕರ ಕ್ಷೇಮಾಭಿವೃದ್ದಿ ಟ್ರಸ್ಟ್ನ ಅಧ್ಯಕ್ಷ ಕೆ.ವಿ. ಸುರೇಶ್ ಕುಮಾರ್ ಅರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಹನಗಳ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸೆ.೧೧ ರಂದು ಕರೆದಿದ್ದ ಬೆಂಗಳೂರು ಬಂದ್ ಹಾಗೂ ಪ್ರತಿಭಟನೆಯಲ್ಲಿ ಸುಮಾರು ೧೨ ಲಕ್ಷ ವಾಹನಗಳು ಬಂದ್‌ನಲ್ಲಿ ಪ್ರತ್ಯÃಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬಂದ್ ಕರೆಯನ್ನು ಯಶಸ್ವಿಗೊಳಿಸಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಮನವಿಯನ್ನು ಸ್ವೀಕರಿಸಿ ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಿದರು, ಇನ್ನು ಕೆಲವು ಬೇಡಿಕೆಗಳ ಈಢೇರಿಕೆಗೆ ನಿಗಧಿತ ಸಮಯವಕಾಶವನ್ನು ತಿಳಿಸದೆ ಜಾರಿಕೆ ಉತ್ತರವನ್ನು ನೀಡಿರುವುದು ಖಂಡನೀಯ ಎಂದರು.

ಚಾಲಕವೃತ್ತಿಯನ್ನೆ ಅವಲಂಭಿಸಿರುವ ಕುಟುಂಬಗಳಿಗೆ ಸರ್ಕಾರದ ಅವೈಜ್ಞಾನಿಕ ತೀರ್ಮಾನಗಳಿಂದ ತೀರಾ ಅನ್ಯಾಯವಾಗಿದೆ. ತಾಳ್ಮೆ ಹಾಗೂ ಸಹನೆಗೂ ಒಂದು ಮಿತಿ ಇದೆ. ಅದರೆ ಸರ್ಕಾರವು ಇದನ್ನು ನಮ್ಮಗಳ ಬಲಹೀನತೆಯೆಂದು ತಿಳಿದಂತೆ ಇದೆ. ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆಗಳನ್ನು ಖಾಸಗಿ ವಾಹನಗಳು ನೀಡಿದರೂ ಸಹ ಸರ್ಕಾರದಿಂದ ಯಾವೂದೇ ಸಮಾಜಿಕ ಭದ್ರತೆ ನೀಡದೆ ಕಾರ್ಪೋರೇಟರ್ ಕಂಪನಿಗಳ ನೀತಿಗಳನ್ನು ಪಾಲಿಸುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದರು.

ವಾಹನಗಳಿಗೆ ಬಂಡವಾಳ ಚಾಲಕನದು ಅಗಿದೆ. ವಾಹನಗಳ ಚಾಲಕರ ಮತ್ತು ಗ್ರಾಹಕರ ನಡುವೆ ಸೇತುವೇಯಾಗಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ ಹೊರತು ಕಂಪನಿಯದು ಯಾವೂದೇ ಬಂಡಾವಳ ಇಲ್ಲ. ಈ ಕಂಪನಿಗಳಲ್ಲಿ ನೊರಾರು ಮಂದಿ ಇದ್ದರೂ ಸಹ ಯಾವೂದೇ ಕಾರ್ಮಿಕ ಕಾಯ್ದೆಗಳನ್ನು ಪಾಲಿಸುತ್ತಿಲ್ಲ. ಅವರಿಗೆ ಫಿ.ಎಫ್. ಅಗಲಿ, ಇ.ಎಸ್.ಐ. ಸೌಲಭ್ಯಗಳಾಗಲಿ ಅಥವಾ ಪಿಂಚಣಿ ಸೌಲಭ್ಯಗಳಾಗಲಿ ನೀಡದೆ ಶೋಷಣೆಗೆ ಒಳಪಡೆಸಿವೆ. ಕಂಪನಿಯ ನಿಬಂಧನೆಗಳಿಗೆ ಒಳಪಟ್ಟು, ೧೦-೧೨ ಗಂಟೆ ದುಡಿದರೂ ಸಹ ೧೫೦೦-೧೬೦೦ ರೂಗಳಾಗಿರುತ್ತದೆ. ಕಂಪನಿಗೆಳಿಗೆ ಸೇವಾ ಶುಲ್ಕ ಪಾವತಿಸಿ, ವಾಹನದ ಸಾಲಗಳ ಕಂತುಗಳು ಪಾವತಿಸಿ ದುಡಿಯುತ್ತಿದ್ದರೂ ಸಹ ಚಾಲಕರಿಗೆ ಯಾವೂದೇ ಸೇವಾ ಭದ್ರತೆ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.

ಕಳೆದ ೨೦೨೧-೨೨ ಸಾಲಿನಲ್ಲಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ಎಸ್.ಎಸ.ಎಲ್.ಸಿ.ಗೆ ೧೦ ಸಾವಿರ ರೂ, ಪಿ.ಯು.ಸಿಗೆ ೧೫ ಸಾವಿರ, ಪದವಿ ವ್ಯಾಸಂಗದ ವಿದ್ಯಾರ್ಥಿಗಳಿಗೆ ವಿದ್ಯಸಿರಿ ಯೋಜನೆಯಲ್ಲಿ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಅದನ್ನು ಈ ಸರ್ಕಾರ ತಡೆ ಹಿಡಿದಿರುವುದು ಸಮಂಜಸವಲ್ಲ. ಚಾಲಕರ ಮಕ್ಕಳಿಗೆ ಪ್ರಾಥಮಿಕ ಶಾಲೆಯ ಹಂತದಿAದಲೇ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡ ಬೇಕು, ಅಪಘಾತ ಪರಿಹಾರ ಯೋಜನೆಯಡಿ ಚಿಕಿತ್ಸೆ ಮತ್ತು ಮರಣದ ಸಂದರ್ಭದಲ್ಲಿ ಸಾರಿಗೆ ಕಾಯ್ದೆಯಲ್ಲಿ ೧೦ ಸಾವಿರ ರೂ ಪರಿಹಾರವನ್ನು ಸೇರ್ಪಡೆ ಮಾಡಬೇಕೆಂದು ಆಗ್ರಹ ಪಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net