ಸರ್ಕಾರದ ನಿರ್ಲಕ್ಷೃಕ್ಕೆ 11 ಜನರ ಸಾವು

RCB
Published on

ಸರ್ಕಾರದ ನಿರ್ಲಕ್ಷ್ಯದಿಂದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಅವಘಡ ನಡೆದಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ತಯಾರಿ ಮಾಡಿಕೊಳ್ಳದ ಕಾರಣಕ್ಕೆ ಅವಘಡ ಸಂಭವಿಸಿದೆ. ಹೀಗಾಗಿ ಸರ್ಕಾರ ಘಟನೆಯ ನೈತಿಕ ಹೊಣೆ ಹೊರಬೇಕಿದ್ದು, 11 ಜನರ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ಘಟನೆಯಿಂದಾಗಿ ರಾಜ್ಯದ ಮರ್ಯಾದೆ ದೇಶದಲ್ಲಿ ಹಾಳಾಗಿದ್ದು, ಇಡೀ ಘಟನೆಯಲ್ಲಿ ಸಂಭವಿಸಿದ ಸಾವಿನ ಹೊಣೆಯನ್ನು ಸಿಎಂ, ಡಿಸಿಎಂ ಹೊರಬೇಕೆಂದು ಆಗ್ರಹಿಸಿದರು.

ಸಂಭ್ರಮಾಚರಣೆ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕ್ರಮದಂತೆ ಕಾಣುತ್ತಿತ್ತು. ಕಾಂಗ್ರೆಸ್ ಸಚಿವರು, ಶಾಸಕರ ಮಕ್ಕಳು, ಮೊಮ್ಮಕ್ಕಳು ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಿದ್ದರು. ಬೇರೆ ರಾಜ್ಯಗಳಲ್ಲಿ ಐಪಿಎಲ್ ಗೆದ್ದಾಗ ವ್ಯವಸ್ಥಿತವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ತರಾತುರಿಯಲ್ಲಿ ಮಾಡಿದ್ದು, ಪೊಲೀಸ್ ಭದ್ರತೆಯನ್ನು ಸರಿಯಾಗಿ ಮಾಡದೆ ಸಂಭ್ರಮಾಚರಣೆಗೆ ಆಹ್ವಾನ ನೀಡಿದ್ದು ಅವೈಜ್ಞಾನಿಕ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net