

ಬೀರೂರು: ಗಾಂಧಿ ಅವರು ಸತ್ಯ, ಅಹಿಂಸೆ, ಸ್ವಾಭಿಮಾನ ಧ್ಯೇಯದ ಸರಳ ಹೋರಾಟ ಮಾರ್ಗದ ಮೂಲಕ ದೇಶವಾಸಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಧಾನಪಾತ್ರ ವಹಿಸಿದರು ಎಂದು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್ ತಿಳಿಸಿದರು.
ಪುರಸಭಾ ಕಚೇರಿಯಲ್ಲಿ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್‌ಇಂಡಿಯಾ ಚಳವಳಿಯಂಥ ಪ್ರಮುಖ ಚಳವಳಿಗಳನ್ನು ಮುನ್ನಡೆಸಿದರು. ಸ್ವಚ್ಛ ಭಾರತ ಕಲ್ಪನೆ, ಸರ್ವಸಮಾನತೆಯ ಆದರ್ಶಗಳು ಜಗತ್ತಿನಾದ್ಯಂತ ಪ್ರೇರಕವಾಗಿವೆ ಎಂದರು. ಲಾಲ್ ಬಹಾದೂರ್ ಶಾಸ್ತ್ರಿ ದೇಶಕ್ಕಾಗಿ ಅವರ ಬದ್ಧತೆ ಮಾದರಿ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರಘು ಮಾತನಾಡಿ, ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ವ್ಯಕ್ತಿಗತ ಮತ್ತು ಸಾರ್ವಜನಿಕ ಬದುಕಿನುದ್ದಕ್ಕೂ ನಮ್ಮೆಲ್ಲರಿಗೂ ಪ್ರೇರಕಶಕ್ತಿಯಾಗಿದ್ದಾರೆ ಎಂದರು.
ಮುಖ್ಯಾಧಿಕಾರಿ ಜಿ.ಪ್ರಕಾಶ್, ಆರೋಗ್ಯಾಧಿಕಾರಿ ಲಕ್ಷ್ಮಣ್, ಪೌರಸೇವಾ ನೌಕರ ಸಂಘದ ಅಧ್ಯಕ್ಷೆ ಜಯಮ್ಮ, ಪುರಸಭಾ ನೌಕರರು, ಸಿಬ್ಬಂದಿ ಇದ್ದರು.