

ಯಾದಗಿರಿ: ಸರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಶ ರವೀಂದ್ರ ಎಲ್.ಹೊನೋಲೆ ಸಲಹೆ ನೀಡಿದರು.
ಶುಕ್ರವಾರ ಗುರುಮಠಕಲ್ ಪಟ್ಟಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಕಾಮರ್ಿಕ ಇಲಾಖೆ, ತಾಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಬಾಲ ಕಾಮರ್ಿಕ ಪದ್ಧತಿ ವಿರೋ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಸಾಕಷ್ಟು ಸೌಲಭ್ಯ ನೀಡಿದೆ. ನಿಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಾನಾ ಯೋಜನೆ ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯಾದಗಿರಿ ಮಹಿಳಾ ಪೊಲೀಸ್ ಠಾಣೆ ಸಿಪಿಐ ರಾಘವೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡತನ ಮತ್ತು ಅನಕ್ಷರತೆ ಕಾರಣದಿಂದ ಬಾಲ ಕಾಮರ್ಿಕ ಪದ್ಧತಿ ಇನ್ನೂ ಜೀವಂತವಾಗಿದೆ. ಮಕ್ಕಳಿಗೆ ಮೊದಲು ಶಾಲೆಗೆ ಕಳಿಸಉವ ಮೂಲಕ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಹೇಳಿದರು.
ಇಲಾಖೆಯ ರಿಯಾಜ್ ಪಟೇಲ್ ಪ್ರಾಸ್ತಾವಿಕ ಮಾತನಾಡಿ, ಸಮಾಜದಲ್ಲಿನ ಇಂಥ ಅನಿಷ್ಠ ಪದ್ಧತಿಗಳನ್ನು ದಮನ ಮಾಡಲು ಇಲಾಖೆ ಸಾಕಷ್ಟು ಜಾಗೃತಿ ಜಾಥಾ ಆಯೋಜಿಸುತ್ತಿದೆ. ವಿಶೇಷವಾಗಿ ಸಕರ್ಾರಿ ಶಾಲೆಗಳಲ್ಲಿ ಚಿತ್ರಕಲೆ, ಬಾಷಣ ಹಾಗೂ ಪ್ರಬಂಧ ಸ್ಪಧರ್ೆ ಆಯೋಜಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಎಸ್ಐ ಎನ್.ಕೆ.ದೌಲತ್, ಮುಖ್ಯಗುರು ಮಲ್ಲಿಕಾಜರ್ುನ ಬಿಳ್ಹಾರ, ಭಾರತಿ ಸಜ್ಜನ್, ಶ್ರೀಕೃಷ್ಣ, ಕೃಷ್ಣವೇಣಿ, ಗಂಗಮ್ಮ ಹಿರೇಮಠ, ವೆಂಕಟಪ್ಪ, ಸವಿತಾ, ಅಮೃತರಾವ್ ಕೊತ್ವಾಲ ಇದ್ದರು.
ಕಾಮರ್ಿಕ ನಿರೀಕ್ಷಕ ಶಿವರಾಜ ಪಾಟೀಲ್ ಸ್ವಾಗತಿಸಿದರು. ನಿಂಗಾನಂದ ಗೋಗಿ ನಿರೂಪಿಸಿ, ವಂದಿಸಿದರು.