ಸರ ಕದ್ದ ಆರೋಪಿ ಬಂಧನ / ಆತನಿಂದ ಸರ ಮತ್ತು ದ್ವಿಚಕ್ರ ವಾಹನ ವಶ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರಗಳ್ಳತನ ಮಾಡಿದ ಆರೋಪಿಯೊಬ್ಬನನ್ನು ಕೋಲಾರ ನಗರದ ಗಲ್‌ಪೇಟೆ ಪೋಲಿಸ್ ಠಾಣೆಯ ಪೋಲಿಸರು ಆರೋಪಿಯನ್ನು ಬಂಧಿಸಿ ಆತನಿಂದ ೨೦ ಗ್ರಾಂ ಚೈನ್ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಶ್ರೀನಿವಾಸಪುರ ತಾಲ್ಲೂಕು ಇಂದಿರಾನಗರದ ಮುಬಾರಕ್ (೩೨) ಆಗಿದ್ದು, ಆತನಿಂದ ಅಪಹರಿಸಿದ್ದ ೨೦ ಗ್ರಾಂ ಚೈನ್ ಮತ್ತು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿರುವ ಗಲ್‌ಪೇಟೆ ಪೋಲಿಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ವರ್ಷ ೨೦೨೪ ಡಿಸೆಂಬರ್ ೭ ರಂದು ಕಾರಂಜಿಕಟ್ಟೆಯ ಶಿಲ್ಪ ಎಂಬುವವರು ಸಂಜೆ ೭ ಗಂಟೆ ಸಮಯದಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಕತ್ತಿನಲ್ಲಿದ್ದ ಚೈನ್‌ನ್ನು ದ್ವಿಚಕ್ರವಾಹನದಲ್ಲಿ ಬಂದ ಆರೋಪಿ ಕಿತ್ತುಕೊಂಡು ಪರಾರಿಯಾಗಿದ್ದ.

ಗಲ್‌ಪೇಟೆ ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮುಖ್ಯ ಪೇದೆ ವಾಸುದೇವಮೂರ್ತಿ ಮತ್ತು ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಗಂಗಾಧರ್, ಶ್ರೀನಿವಾಸ್, ಮಮತ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಪಿ. ನಿಖಿಲ್ ಸಿಬ್ಬಂದಿಯನ್ನು ಪ್ರಶಂಸಿದ್ದಾರೆ.

ಚಿತ್ರ ೨೨ ಕೆ.ಎಲ್.ಆರ್. ೦೪ : ಕೋಲಾರದ ಗಲ್‌ಪೇಟೆ ಪೋಲಿಸರು ಸರ ಕದ್ದ ಆರೋಪಿಯನ್ನು ಬಂಧಿಸಿರುವುದು. ವೃತ್ತ ನಿರೀಕ್ಷಕ ಲೋಕೇಶ್, ಮುಖ್ಯಪೇದೆ ವಾಸುದೇವಮೂರ್ತಿ ಮುಂತಾದವರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net