ಸಮುದಾಯ ಪ್ರಗತಿಗೆ ಸಂಘಟನೆ ಅಗತ್ಯ

2525
Published on

ಹಿರೇಬಾಗೇವಾಡಿ: ಗ್ರಾಮದ ಜಾಲಿ ಕರೆಮ್ಮ ದೇವಸ್ಥಾನದ ಸಭಾಭವನದಲ್ಲಿ ಜನಿವಾರ ಸಮಾಜದ ಸೇವಾ ಅಭಿವೃದ್ಧಿ ಸಂಘವನ್ನು ಗುರುವಾರ ಉದ್ಘಾಟಿಸಲಾಯಿತು. ನಿವೃತ್ತ ಶಿಕ್ಷಕ ಜಯಪಾಲ ಗೌಡರ ಮಾತನಾಡಿ, ಒಂದು ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಮುಖ್ಯವಾಗಿದೆ. ಬೇಡಿಕೆ ಈಡೇರಿಸಿಕೊಳ್ಳಲು ಸಮುದಾಯದ ಮುಖಂಡರು ವೇದಿಕೆಯಲ್ಲಿ ಒಗ್ಗೂಡುವುದು ಅಗತ್ಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಶ್ರೀಶೈಲ ಕಮ್ಮಾರ ಮಾತನಾಡಿ, ಹಿರೇಬಾಗೇವಾಡಿ ಗ್ರಾಮದ ಜನಿವಾರ ಧರಿಸುವ ಒಟ್ಟು 8 ಪಂಗಡ ಸೇರಿಸಿ ಈ ಸಂಘ ಸ್ಥಾಪಿಸಲಾಗಿದೆ. ಎಲ್ಲರೂ ಸೇರಿ ಸಮಾಜದ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಆಶಿಸಿದರು. ಬಸವರಾಜ ಕಡೇಮನಿ, ಶ್ರೀಕಾಂತ ಮಾಧುಭರಮಣ್ಣವರ, ಅಶೋಕ ಕಮ್ಮಾರ ಮಾತನಾಡಿದರು. ಉಳವಪ್ಪಜ್ಜ ಸಾನ್ನಿಧ್ಯ ವಹಿಸಿದ್ದರು.

ಜನಕರಾಜ ದೇಸಾಯಿ, ಧರ್ಮರಾಜ ದೇಸಾಯಿ, ಸಂಜು ದೇಸಾಯಿ, ಸಿದ್ದಪ್ಪ ಮಾಧುಭರಮಣ್ಣವರ, ಗಂಗಪ್ಪ ಕರಯತಗಾರ, ಬಸವಣ್ಣೆಪ್ಪ ಕಡೆಟ್ಟಿ, ಪುಂಡಲೀಕ ಬಡಿಗೇರ, ವೀರಭದ್ರ ಪತ್ತಾರ, ಬಾಬು ಕಮ್ಮಾರ, ಶಶಿಧರ ಕಮ್ಮಾರ, ಕಾಳಪ್ಪ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net