

ರಾಯಬಾಗ: ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹಕ್ಕೆ ನಡೆಸುತ್ತಿರುವ ಸಮೀಕ್ಷೆಯಲ್ಲಿ ಹೊಲೆಯ ಸಮಾಜದವರು ಹೊಲೆಯ ಬರೆಯಿಸಬೇಕೆಂದು ಸಮುದಾಯದ ಮುಖಂಡ ಸಿದ್ದಾರ್ಥ ಶಿಂಗೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ಮೇರೆಗೆ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹಿಸಲು ಸೋಮವಾರದಿಂದ ೧೭ರ ವರೆಗೆ ಸಮೀಕ್ಷೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿದೆ. ಹೊಲೆಯ ಸಮುದಾಯದ ಜನರು ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಬೇಕು ಎಂದು ತಿಳಿಸಿದರು.
ನಾಮದೇವ ಕಾಂಬಳೆ, ಚಿದಾನಂದ ತಳಕೆರೆ, ದಿಲೀಪ ಪಾಯನ್ನವರ, ಲೋಕೇಶ ಕಾಂಬಳೆ, ವಿನಾಯಕ ಕಾಂಬಳೆ ಇದ್ದರು.