ಸಮೀಕ್ಷೆಯಲ್ಲಿ 1.04 ಕೋಟಿ ಮಂದಿ ನೋಂದಣಿ

Aanjaneya
Published on

ಚಿತ್ರದುರ್ಗ: ಒಳ ಮೀಸಲಾತಿ ಜಾರಿ ಸಂಬಂಧ ಎಸ್ಸಿ ಸಮುದಾಯದವರ ಜಾತಿ ಗಣತಿಯೂ ಮೇ 5ರಿಂದ ರಾಜ್ಯಾದ್ಯಂತ ನಡೆದಿದ್ದು, ಸಮೀಕ್ಷೆಯಲ್ಲಿ ಈವರೆಗೂ 24.5 ಲಕ್ಷ ಕುಟುಂಬಗಳು ಪಾಲ್ಗೊಂಡಿವೆ. 1.04 ಕೋಟಿ ಮಂದಿಯ ನೋಂದಣಿ ಪ್ರಕ್ರಿಯೆ ಮುಗಿದಿದೆ. ಅದರಲ್ಲಿ 26 ಲಕ್ಷ ನಮ್ಮ ಜಾತಿಯವರು ಇರಬಹುದು ಎಂಬ ಮಾಹಿತಿ ಇದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾ. ನಾಗಮೋಹನ್ ದಾಸ್ ಆಯೋಗ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿಯ ಸವಿವರವಾದ ವರದಿ ಸಲ್ಲಿಸಿದ ನಂತರ ಪರಿಶಿಷ್ಟ ಜಾತಿಯವರಿಗೆ ಸಾಮಾಜಿಕ ನ್ಯಾಯ ನೀಡಲು ತ್ವರಿತವಾಗಿ ಸಿಎಂ ಒಳ ಮೀಸಲಾತಿ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net