ಸಮಾಜದಲ್ಲಿ ಹೆಣ್ಣು ಧೈರ್ಯದಿಂದ ಬದುಕಬೇಕು : ಸಾಮಾಜಿಕ ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಸಲಹೆ

06BTP03
Published on

ಮೈಸೂರು : ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳು ಧೈರ್ಯದಿಂದ ಬದುಕುವ ಮೂಲಕ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಮಾಜಿಕ ಚಿಂತಕಿ, ಗಾಯಕಿ ಡಾ.ಶ್ವೇತಾ ಮಡಪ್ಪಾಡಿ ಹೇಳಿದರು.


ಧಾನ್ ಫೌಂಡೇಷನ್ ಅವರ ಶ್ರೀ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟ ವತಿಯಿಂದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ ಸಮೂಹದ ಮಹಾಸಭೆಯಲ್ಲಿ ಮಾತನಾಡಿದರು.


ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಇಂದಿಗೂ ನಡೆಯುತ್ತಿವೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಧ್ವನಿಯಾಗಿದ್ದರು. ನಾವು ಕೇವಲ ಮೌನ ಮಹಿಳೆಯಾಗಿ ಇರಬಾರದು. ತಪ್ಪನ್ನು ತಿದ್ದುವ ಶಕ್ತಿ ನಮ್ಮಲ್ಲಿದ್ದು ಪ್ರತಿಯೊಬ್ಬರೂ ದೌರ್ಜನ್ಯ ಎದುರಿಸುವ ಧೈರ್ಯ ಬೆಳೆಸಿಕೊಳ್ಳ್ಳಬೇಕು ಎಂದರು.


ಕುಟುಂಬದ ನಿರ್ವಹಣೆ ರಕ್ಷಣೆಗೆ ಮಹಿಳೆಯ ಪಾತ್ರ ಅಪಾರವಾಗಿದೆ. ಈ ಸಮಾಜದಲ್ಲಿ ಹೆಣ್ಣಿಗೆ ಮತ್ತಷ್ಟು ಗೌರವ ದೊರೆಯಬೇಕು. ಮಹಿಳೆಯರು ಕೂಡ ವಿದ್ಯೆಗೆ ಹೆಚ್ಚಿನ ಒತ್ತು ನೀಡಿ ತಮ್ಮ ಹೆಣ್ಣು ಮಕ್ಕಳಿಗೆ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡುವುದನ್ನು ಬದಿಗಿಟ್ಟು, ಅವರಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.


ಧಾನ್ ಫೌಂಡೇಷನ್ ಸುಮಾರು ಐವತ್ತುಕ್ಕೂ ಹೆಚ್ಚು ಲಕ್ಷ ಮಹಿಳೆಯರನ್ನು ಒಂದುಗೂಡಿಸುವ ಮೂಲಕ ಅವರನ್ನು ಸ್ವಾವಲಂಬಿಯಾಗಿ ಬದುಕಲು ಕಾರಣವಾಗಿದೆ. ಇಂತಹ ಸಂಸ್ಥೆಗಳ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಅವರೊಂದಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.


ಒಕ್ಕೂಟದ ಸಂಯೋಜಕ ನಾರಾಯಣ ಹೆಗ್ಗಡೆ ಮಾತನಾಡಿ, ಧಾನ್ ಫೌಂಡೇಷನ್ ಹಿಂದುಳಿದ ಅಭಿವೃದ್ಧಿಗಾಗಿ ಪ್ರಾರಂಭವಾದಂತಹ ಸಂಸ್ಥೆ. ಸುಮಾರು ಮೂವತ್ತು ವರ್ಷಗಳಿಂದ ಜನರಿಗಾಗಿ ದುಡಿಯುವ ಮೂಲಕ ದೇಶದಲ್ಲಿ ಅತಿ ದೊಡ್ಡ ಎನ್‌ಜಿಒ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೇಕ ಬಡ ಮಹಿಳೆಯರಿಗೆ ಉಳಿತಾಯ ಎಂಬ ಕಲ್ಪನೆಯ ಅರಿವು ಮೂಡಿಸುವ ಮೂಲಕ ಇಂದು ಸಂಸ್ಥೆಯಲ್ಲಿ ಸುಮಾರು ಏಳು ಕೋಟಿ ಬಡ ಮಹಿಳೆಯರ ಹಣ ಉಳಿತಾಯದಲ್ಲಿದೆ. ಉಳಿತಾಯ ಮೊದಲು, ಸಾಲ ನಂತರ ವಿಮೆ ಕಡ್ಡಾಯ ಎಂಬ ಉದ್ದೇಶದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಎಲ್ಲ ಸದಸ್ಯರು ಗಣ್ಯರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು. ಡಾ.ಶ್ವೇತಾ ಮಡಪ್ಪಾಡಿಜಾ ಜಾನಪದ ಗೀತೆಯನ್ನು ಹಾಡಿ ಸಭೆಗೆ ಮೆರಗು ತಂದುಕೊಟ್ಟರು. ಒಕ್ಕೂಟದ ಅಧ್ಯಕ್ಷೆ ಲತಾ, ನಿರ್ದೇಶಕಿಯರಾದ ಲೀಲಾವತಿ, ನಾಗಮ್ಮ, ಮುಖಂಡ ರಾಮೇಗೌಡ, ರಮ್ಯಾ ಸೇರಿದಂತೆ ಸದಸ್ಯರು ಇದ್ದರು.

06ಬಿಟಿಪಿ01: ಬೆಟ್ಟದಪುರದ ಸಮುದಾಯ ಭವನದಲ್ಲಿ ಧಾನ್ ಫೌಂಡೇಶನ್ ಅವರ ಶ್ರೀ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟವತಿಯಿಂದ ಆಯೋಜಿಸಿದ ಸಮೂಹದ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಡಾ.ಶ್ವೇತಾ ಮಡಪ್ಪಾಡಿ, ನಾರಾಯಣ್ ಹೆಗ್ಗಡೆ, ಲತಾ, ಲೀಲಾವತಿ, ನಾಗಮ್ಮ, ರಮ್ಯ ಇದ್ದರು.
06ಬಿಟಿಪಿ02: ಬೆಟ್ಟದಪುರದ ಸಮುದಾಯ ಭವನದಲ್ಲಿ ಧಾನ್ ಫೌಂಡೇಶನ್ ಅವರ ಶ್ರೀ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟವತಿಯಿಂದ ಆಯೋಜಿಸಿದ ಸಮೂಹದ ಮಹಾಸಭೆಯಲ್ಲಿ ಸಾಮಾಜಿಕ ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಮಾತನಾಡಿದರು. ನಾರಾಯಣ್ ಹೆಗ್ಗಡೆ, ಲತಾ, ಲೀಲಾವತಿ, ನಾಗಮ್ಮ, ರಮ್ಯ ಇದ್ದರು.
06ಬಿಟಿಪಿ03: ಬೆಟ್ಟದಪುರದ ಸಮುದಾಯ ಭವನದಲ್ಲಿ ಧಾನ್ ಫೌಂಡೇಶನ್ ಅವರ ಶ್ರೀ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟವತಿಯಿಂದ ಆಯೋಜಿಸಿದ ಸಮೂಹದ ಮಹಾಸಭೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಹಿಳೆಯರು ಮಹಿಳೆಯರು ಸಂಭ್ರಮಿಸಿದರು. ಡಾ.ಶ್ವೇತಾ ಮಡಪ್ಪಾಡಿ, ನಾರಾಯಣ್ ಹೆಗ್ಗಡೆ, ಲತಾ, ಲೀಲಾವತಿ, ನಾಗಮ್ಮ, ರಮ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net