

ಗೌರಿಬಿದನೂರು ತಾಲೂಕು ಸವಿತಾ ಸಮುದಾಯದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಬೇಕು ಎಂದು ತಾಲೂಕು ಸವಿತಾ ಸಮಾಜ ಅಧ್ಯಕ್ಷ.ಜಿ.ಡಿ.ಶಿವಕುಮಾರ್ ಕೋರಿದರು.
ತಾಲೂಕಿನ ತೊಂಡೇಬಾವಿ ಮುತ್ತರಾಯನ ದೇವಸ್ಥಾನ ಆವರಣದಲ್ಲಿ ಬುಧವಾರ ತೊಂಡೇಬಾವಿ ಹೋಬಳಿ ಸವಿತಾ ಸಮಾಜದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೆಲವರು ತಾಲೂಕಿನಲ್ಲಿ ಸಮಾಜದ ಹಿತ ಮರೆತ ಸ್ವಾರ್ಥಕ್ಕೆ ಸಮುದಾಯದ ಹೆಸರನ್ನು ಬಳಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಅಂತಹ ಅವಕಾಶವಾದಿಗಳನ್ನು ಪ್ರೋತ್ಸಾಹಿಸಬಾರದು. ನೂತನ ನಿರ್ದೇಶಕರು ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜ ಮುಂದುವರೆಯಲು ಒಗ್ಗಟ್ಟಾಗಿ ಸಂಘಟನೆ ಮಾಡಬೇಕು ಎಂದರು.ಸಮುದಾಯದ ಗೌರವಾಧ್ಯಕ್ಷ ಪಿ.ಎನ್. ನಂದೀಶ್‌ಕುಮಾರ್ ಮಾತನಾಡಿ, ಸಮುದಾಯದವರು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಸಮಾಜದ ಬೆಳವಣಿಗೆಗೆ ಮುಂದಾಗಬೇಕು ಎಂದು ತಿಳಿಸಿದರು.
ಗೌರಿಬಿದನೂರು ತಾಲೂಕಿನ ಸವಿತಾ ಸಮಾಜದ ಕಲಾವಿದರ ಸಂಘದ ಅಧ್ಯಕ್ಷ ಎ.ಆವುಲಮೂರ್ತಿ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕು. ಸರ್ಕಾರ ದೇವನಹಳ್ಳಿ ಬಳಿ ನಾದಸ್ವರ ಮತ್ತು ಡೋಲು ಸಂಗೀತ ಪಾಠಶಾಲೆ ಪ್ರಾರಂಭಿಸಿದ್ದು ಇದರ ಉಪಯೋಗ ಪಡೆಯಬೇಕು ಎಂದು ಹೇಳಿದರು.
ತಾಲೂಕಿನ ಸವಿತಾ ಸಮಾಜದ ಪ್ರಧಾನ ಕಾರ್ಯದಶಿ ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಎನ್.ಸತೀಶ್, ತೊಂಡೇಬಾವಿ ಹೋಬಳಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಗೌರಾವಾಧ್ಯಕ್ಷ ನಾರಾಯಣಪ್ಪ , ಸಂಘಟನಾ ಕಾರ್ಯದರ್ಶಿ ರಂಜೀತ್ ಮತ್ತಿತರರಿದ್ದರು.
ತೊಂಡೇಬಾವಿ ಹೋಬಳಿ ಪದಾಧಿಕಾರಿಗಳು ಗೌರಾವಾದ್ಯಕ್ಷರಾಗಿ ಟಿ.ಎನ್.ನಾರಾಯಣಪ್ಪ ಅಧ್ಯಕ್ಷರಾಗಿ ಎ.ಕುಮಾರ್,
ಉಪಾಧ್ಯಕ್ಷರಾಗಿ ಕೆ.ಆರ್. ರತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ,ಸಹಕಾರ್ಯದರ್ಶಿಯಾಗಿ ರಂಜಿತ್‌ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಯಂಗಪ್ಪ, ಖಜಾಂಚಿಯಾಗಿ ಬಿ.ಕೆ. ಪ್ರಸನ್ನಕುಮಾರ್, ನಿರ್ದೇಶಕರಾಗಿ ಪಿ.ಆರ್.ನರಸಿಂಹಮೂರ್ತಿ,ಕೃಷ್ಣಪ್ಪ, ಟಿ.ಎನ್. ಕೃಷ್ಣಪ್ಪ, ಲಕ್ಷ್ಮೀನಾರಾಯಣಪ್ಪ ಆಯ್ಕೆಯಾದರು.