ಸಮಾಜ ಸೇವೆಯಿಂದ ಜನ್ಮ ಸಾರ್ಥಕ

Published on

ಚಾಮರಾಜನಗರ: ಪರಮಾತ್ಮನ ಕೃಪೆಯಿಂದ ನಾವೆಲ್ಲರು ಜೀವಿಸುತ್ತಿದ್ದೇವೆ. ಮನುಷ್ಯ ಜನ್ಮ ಬಹಳ ಶೇಷ್ಠವಾದದು, ಇರುವಷ್ಟು ದಿನಗಳು ಸೇವೆ ಮಾಡುವ ಮೂಲಕ ನಮ್ಮ ಜನ್ಮವನ್ನು ಸಾರ್ಥಕ ಗೊಳಿಸಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯದ ಸಂಚಾಲಕಿ ರಾಜಯೋಗನಿ ಬಿ.ಕೆ. ದಾನೇಶ್ವರಿಜೀ ತಿಳಿಸಿದರು.


ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ನೇಹ, ಭಾತೃತ್ವ ಸಹೋದರತೆಯನ್ನು ಬೆಳೆಸಿಕೊಂಡು ಎಲ್ಲರೂ ಸಹ ಸಹಬಾಳ್ವೆಯಿಂದ ಬದುಕಿದರೆ ಪ್ರಗತಿಯತ್ತ ಸಾಗಲು ಸಾಧ್ಯವಿದೆ ಎಂದರು.

ಇದೇ ವೇಳೆ ಸಮಾಜ ಸೇವಕ ಎಲ್.ಸುರೇಶ್ ಮತ್ತು ಪ್ರಾಧ್ಯಾಪಕ ಸುರೇಶ್ ಎನ್.ಋಗ್ವೇದಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್, ಡಾ. ಎಸ್.ಪಿ. ಬಾಲಸುಬ್ರಮಣ್ಯ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಸುರೇಶ್‌ಗೌಡ, ಪ್ರಕಾಶ್, ಜಯರಾಜ್, ಬಿ.ಕೆ. ಆರಾಧ್ಯ, ಪುಟ್ಟಶೇಖರಮೂರ್ತಿ, ನಟರಾಜು, ಶ್ರೀನಿವಾಸ್, ಸತೀಶ್, ಸಿದ್ದಾಂತ, ಆಶಾ, ಗೀತಾ ಸುಲೋಚನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net