ಸಮಾಜದ ಹಾದಿ ತಪ್ಪಿಸತ್ತಿವೆ ದೃಶ್ಯ ಮಾಧ್ಯಮಗಳು

28Koppa03
ಕೊಪ್ಪದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ನಾಟಿ ವೈದ್ಯ ಎಚ್.ಆರ್.ನಾರಾಯಣ ಸ್ವಾಮಿ ಹೊಸಮನೆ, ಉಪೇಂದ್ರ ನಾಯಕ್ ಮೆಣಸೂರು, ಮಂಜುನಾಥ್ ಹೊಲಗೋಡು ಅವರನ್ನು ಸನ್ಮಾನಿಸಲಾಯಿತು.
Published on

ಕೊಪ್ಪ: ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಪ್ರಚಲಿತ ವಿದ್ಯಮಾನಗಳನ್ನು ತಿಳಿಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ತಾಲೂಕು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಎಚ್.ಎಂ.ರವಿಕಾಂತ್ ಹೇಳಿದರು.
ತಾಲೂಕು ಪತ್ರಕರ್ತರ ಸಂಘದಿಂದ ಬೊಮ್ಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಜನರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಹೊತ್ತ ಪತ್ರಕರ್ತರು ಜ್ಞಾನ ಸಂಪಾದನೆ ಜತೆಗೆ ಘಟನೆಯನ್ನು ವಿಮರ್ಶಾತ್ಮಕವಾಗಿ ನೋಡುವ ದೃಷ್ಟಿಕೋನ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಟಿಆರ್‌ಪಿಗಾಗಿ ದೃಶ್ಯ ಮಾಧ್ಯಮಗಳು ಸಮಾಜದ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ನಡುವೆ ಅನಾರೋಗ್ಯಕರ ಪೈಪೋಟಿ ಇದೆ. ಬಹುತೇಕ ದೃಶ್ಯ ಮಾಧ್ಯಮಗಳು ಬಂಡವಾಳ ಶಾಹಿಗಳ ಹಿಡಿತಕ್ಕೆ ಒಳಪಟ್ಟಿವೆ. ಹಣದ ಹಿಂದೆ ಬಿದ್ದಿರುವುದರಿಂದ ನೈತಿಕ ಮೌಲ್ಯ ಕಳೆದುಕೊಂಡಿವೆ ಎಂದು ವಿಷಾದಿಸಿದರು.
ಬೊಮ್ಮಲಾಪುರ ತ್ರಿಪುರಾಂತಕಿ ಅಮ್ಮನವರ ಸೇವಾ ಸಮಿತಿ ಉಪಾಧ್ಯಕ್ಷ ಕೆ.ಕೆ.ದಿನಮಣಿ ನಾಟಿ ವೈದ್ಯ ಎಚ್.ಆರ್.ನಾರಾಯಣಸ್ವಾಮಿ ಹೊಸಮನೆ, ಸಾಹಿತ್ಯ ಕ್ಷೇತ್ರದ ಉಪೇಂದ್ರ ನಾಯಕ್ ಮೆಣಸೂರು, ಕಲಾ ಕ್ಷೇತ್ರದ ಮಂಜುನಾಥ್ ಹೊಲಗೋಡು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಉಪೇಂದ್ರ ನಾಯಕ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಕೆ.ವಿಶ್ವ ಹೊಸ್ಕೇರಿ, ಉಪಾಧ್ಯಕ್ಷ ರಮೇಶ್ ರಂಗಶ್ರೀ, ಸಹ ಕಾರ್ಯದರ್ಶಿ ಪ್ರಸನ್ನಕುಮಾರ್ ಕಿಬ್ಳಿ, ಗೌರವಾಧ್ಯಕ್ಷ ಎಚ್.ಆರ್.ಸಂಜೀವ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪಿ.ಧರ್ಮಣ್ಣ, ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ಎಲ್.ಸುಧಾ, ಕುವೆಂಪು ಪಿಎಸಿಎಸ್ ನಿರ್ದೇಶಕ ಜಯೇಶ್ ಬಿಳುವಿನಕೊಪ್ಪ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಸ್ರಿಕಟ್ಟೆ ಗೋಪಾಲ್, ಪತ್ರಕರ್ತರಾದ ಎಸ್.ವಿಕ್ರಂ, ಕೆ.ಇ.ನಾಗರಾಜ್, ಎ.ಇ.ಲೋಹಿತಾಶ್ವ, ಪ್ರದೀಪ್ ಹೆಬ್ಬಾರ್, ಉದಯ್ ಕುಮಾರ್ ಜೈನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net