ಸಮಗ್ರ ಮಾಹಿತಿಯ ಹಿಂದು ದಿನದರ್ಶಿಕೆ

17SRINGERI 3
ಶೃಂಗೇರಿ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ವಿಶ್ವಾವಸು ನಾಮಸಂವತ್ಸರದ ದಿನದರ್ಶಿಕೆಯನ್ನು ಹೆಬ್ಬಿಗೆ ಗಣೇಶ ರಾವ್ ಬಿಡುಗಡೆಗೊಳಿಸಿದರು. ಎ.ಎಂ.ಶ್ರೀಧರ ರಾವ್, ಪ್ರವೀಣ್, ಪ್ರೀತಮ್, ಎಸ್.ವಿ.ಸತೀಶ್, ಕೆ.ಆರ್.ದಿನೇಶ್, ಆದಿತ್ಯಾ, ಆಶಾ, ಚಂದ್ರಶೇಖರ್, ರೇಖಾ, ಗೋಪಾಲಕೃಷ್ಣ ಇದ್ದರು.
Published on

ಶೃಂಗೇರಿ: ನಮ್ಮ ಹಿಂದು ಸಂಪ್ರದಾಯದಂತೆ ಯುಗಾದಿಗೆ ವರ್ಷಾಚರಣೆ ಇದ್ದು ನಮ್ಮ ಹಬ್ಬ, ನಿತ್ಯ ತಿಥಿ, ನಕ್ಷತ್ರದ ಸಮಗ್ರ ಮಾಹಿತಿ ಒದಗಿಸುವ ದಿನದರ್ಶಿಕೆ ಉಪಯುಕ್ತವಾಗಿದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹೆಬ್ಬಿಗೆ ಗಣೇಶ ರಾವ್ ಹೇಳಿದರು.

ಮೆಣಸೆ ಗ್ರಾಪಂನ ಶೆಟ್ಟಿಹಳ್ಳಿ ಚಂದ್ರಶೇಖರ ರಾವ್ ಮನೆಯಲ್ಲಿ ಸೋಮವಾರ ಹೆಬ್ಬಾರ್ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿ ವರ್ಷವೂ ಸಮಾಜದ ಪ್ರತಿ ಮನೆಗೂ ದಿನದರ್ಶಿಕೆ ತಲುಪಿಸಲಾಗುತ್ತಿದೆ ಎಂದರು.

ಶೃಂಗೇರಿ ಘಟಕದ ಅಧ್ಯಕ್ಷ ಎ.ಎಂ.ಶ್ರೀಧರ ರಾವ್ ಮಾತನಾಡಿ, ದಿನದರ್ಶಿಕೆಯೊಂದಿಗೆ ಶ್ರೀಮಠದ ಪಂಚಾಂಗ ನೀಡಲಾಗುತ್ತಿದೆ. ಈಗಾಗಲೇ ತ್ರೈಮಾಸಿಕ ಸಂಚಿಕೆ ವಿಪ್ರ ಧ್ವನಿಯನ್ನೂ ನೀಡಲಾಗಿದೆ ಎಂದರು.

ವ್ಯಾಟ್ಸಾಪ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಆಶಾ ಗಣೇಶ ರಾವ್ ಮತ್ತು ಅನುಷಾ ಅವರಿಗೆ ಬಹುಮಾನ ನೀಡಲಾಯಿತು. ಮುಖಂಡರಾದ ಪ್ರವೀಣ್, ಪ್ರೀತಮ್, ಎಸ್.ವಿ.ಸತೀಶ್, ಕೆ.ಆರ್.ದಿನೇಶ್, ಆದಿತ್ಯಾ, ಆಶಾ, ಚಂದ್ರಶೇಖರ್, ರೇಖಾ, ಗೋಪಾಲಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net