ಸಪ್ತಪದಿ 10 ಜೋಡಿಗೆ‌ ಸೀಮಿತ: ಪೂಜಾರಿ

Published on

ಮೈಸೂರು: ಕರೊನಾ‌‌ ಹಿನ್ನೆಲೆಯಲ್ಲಿ ಸಪ್ತಪದಿ ಸಾಮೂಹಿಕ ವಿವಾಹಗಳಲ್ಲಿ 10 ಜೋಡಿಗಳಿಗೆ ಸೀಮಿತ ಗೊಳಿಸಲು ಉದ್ದೇಶಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಚಾಮುಂಡಿಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಡ ಜನರಿಗೆ ಸಪ್ತಪದಿ ವಿವಾಹ‌ ಸಹಕಾರಿಯಾಗಿದೆ. ಆದರೆ ಕರೊನಾದಿಂದ ಹೆಚ್ಚು ಜನರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಿಂಗಳ ಎರಡು ಮೂರು ಬಾರಿ ಜನರು ಕೇಳಿದ ದಿನದಲ್ಲಿ ಸಾಮೂಹಿಕ ‌ವಿವಾಹ ಮಾಡಲು ಉದ್ದೇಶಿಸಲಾಗಿದೆ ಎಂದರು.

ಜಾತ್ರೆ , ಹಬ್ಬ ವಿಶೇಷ ದಿನಗಳು ಹೆಚ್ಚಾಗಿದೆ. ಆಗಾಗಿ ಸಾಂಪ್ರದಾಯಕ್ಕೆ ಧಕ್ರೆಯಾಗದ ರೀತಿಯಲ್ಲಿ ಆಚರಣೆ ಮಾಡಲಾಗುವುದು. ಮುಂದೆ ಸೋಂಕು ಹೆಚ್ಚಾದರೆ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಾಸ್ಟೆಲ್ ‌ನಲ್ಲಿ ವಾಸ್ತವ್ಯ: ಹಿಂದುಳಿದ ಹಾಸ್ಟೆಲ್ ಗಳಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು‌ ನಾನೂ ಸೇರಿದಂತೆ ರಾಜ್ಯದಿಂದ‌ ಜಿಲ್ಲಾ ಮಟ್ಟದ ಅಧಿಕಾರಿಗಳು‌ ಹಾಸ್ಟೆಲ್ ಗಳಲ್ಲಿ ವಾಸ್ತವ್ಯ ಹೂಡಲಾಗುವುದು ಎಂದು‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net