ಮೈಸೂರು : ತಿ.ನರಸೀಪುರ ತಾಲೂಕಿನ ಚಿದರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 4,03,086 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಿದರವಳ್ಳಿ ಕೆಂಪೇಗೌಡ ತಿಳಿಸಿದರು.
ತಾಲೂಕಿನ ಚಿದರವಳ್ಳಿ ಗ್ರಾಮದ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಲವನ್ನು ಮರು ಪಾವತಿ ಮಾಡುತ್ತಿರುವುದರಿಂದ ಸಂಘ ಲಾಭದತ್ತ ಸಾಗಿದೆ. ಸಾಲ ಮರುಪಾವತಿ ಮಾಡಿದಲ್ಲಿ ಇನ್ನೂ ಹೆಚ್ಚಿನ ಸಾಲ ಪಡೆದು ರೈತರು ಮುಂದುವರಿಯಲು ಸಂಘ ಅವಕಾಶ ಕಲ್ಪಿಸಿಕೊಡಲಿದೆ ಎಂದರು.
ಜಿಲ್ಲಾ ಬ್ಯಾಂಕ್ ಪ್ರತಿನಿಧಿ ರಾಜಪ್ಪ ಮಾತನಾಡಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಪಿ.ರಾಜೇಂದ್ರ ಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ನಾಗರಾಜ ಅರಸ್, ನಿರ್ದೇಶಕರಾದ ಸಿ.ಡಿ.ಜಗದೀಶ್ ಗೌಡ, ಎನ್.ನಾಗರಾಜು, ಎಂ.ಗಿರಿಗೌಡ, ನಾಗರಾಜು, ಸಿದ್ದು, ಆರ್.ಜಿ.ಶಿವಮೂರ್ತಿ, ನಂಜುಂಡಯ್ಯ, ಲಲಿತಮ್ಮ, ಸುನಂದ, ಮಹದೇವಮ್ಮ ಇತರರು ಇದ್ದರು.